Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಮಾತನಾಡಿದ್ದು, ಬಸವರಾಜ್ ಬೊಮ್ಮಾಯಿ ಇದ್ದಾಗ 2d ಮೀಸಲಾತಿ ಕೊಟ್ಟಿದ್ದರು. ಕೆಲವರು ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ತೆಗೆಸಿದ್ರೆ ನಮ್ಮ ಹೋರಾಟ ಇರಲ್ಲ. ಸಿಎಮ್ ಒಂದು ಕೋಮು ಒಲೈಕೆ ಮಾಡುತ್ತಿದ್ದಾರೆ. ನಮಗೆ ಸಿಎಂ ಅನ್ಯಾಯ ಮಾಡುತ್ತಿದ್ದಾರೆ. ಕೋರ್ಟ್ ನಲ್ಲಿ ಸ್ಟೇ ತಗೆಸಬೇಕು ಎಂದಿದ್ದಾರೆ.
ವಕ್ಫ ವಿಚಾರವಾಗಿ ತಂಡ ರಚನೆ ಕುರಿತು ಪ್ರತಿಕ್ರಿಯೆ ನೀಡಲು ಸಿಸಿ ಪಾಟೀಲ್ ನಿರಾಕರಿಸಿದ್ದು, ಕಾಂಗ್ರೆಸ್ ನಲ್ಲಿರೋ 135 ಶಾಸಕರು ಯೋಚನೆ ಮಾಡಬೇಕು. ನಾಳೆ ನೀವು ನಿಮ್ಮ ಮೊಮ್ಮಕ್ಕಳಿಗೆ ಏನ ಹೇಳತೀರಿ..? ವಕ್ಫ ನಿಂದ ನಾಳೆ ನಿಮ್ಮ ಆಸ್ತಿ ಹೋಗತ್ತೆ. ಇದರ ಅರಿವಿಲ್ಲ. ಕಾಂಗ್ರೆಸ್ನ ವೀರಶೈವ ಶಾಸಕರು ಮಕ್ಕಳ ಭವಿಷ್ಯ ಯೋಚನೆ ಮಾಡಬೇಕು. ಇದರ ಬಗ್ಗೆ ನಿಮಗೆ ಕಲ್ಪನೆ ಇಲ್ವಾ. ಇದು ಸರ್ವಾಧಿಕಾರಿ ಸರ್ಕಾರಾನಾ..? ವೋಟ್ ಗಾಗಿ ಕಾಂಗ್ರೆಸ್ ಶಾಸಕರು ವಕ್ಫ್ ಬಗ್ಗೆ ಮಾತಾಡುತ್ತಿಲ್ಲ. ಮಾತಾಡಿದ್ರೆ ಟಿಕೆಟ್ ಸಿಗತ್ತೆ ಇಲ್ಲೋ ಅನ್ನೋ ಭಯ. ಏನು ಮಾತಾಡಿದ್ರು SIT ಅಂತಾರೆ. ಎರಡು ವರ್ಷದ ನಂತರ ಕೋವಿಡ್ ಯಾಕೆ ನೆನಪಾಯ್ತಾ. ಪೂರ್ಣ ಪ್ರಮಾಣದ ವರದಿ ಬರಲಿ. ಸೇಡಿನ ರಾಜಕಾರಣ ಸರಿ ಎಲ್ಲ ಎಂದು ಸಿ.ಸಿ.ಪಾಟೀಲ್ ಹೇಳಿದ್ದಾರೆ.