Hubli News : ಹುಬ್ಬಳ್ಳಿ: ಕಲಘಟಗಿ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ಬೆಂಗಳೂರಿನ ಭನ್ನೇರಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ..ಎಂ. ನಿಂಬಣ್ಣವರ್ 76ನೇ ವಯಸ್ಸಿನವರಾಗಿದ್ದಾರೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಬನ್ನೇರುಘಟ್ಟದ ಅಪೊಲೋ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 11:10ಕ್ಕೆ ಕೊನೆಯುಸಿರೆಳದಿದ್ದಾರೆ. ಇಂದೇ ಕಲಘಟಗಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತಿದೆ.
ನಾಳೆ ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ್ದಾರೆ.ಧಾರವಾಡದ ಜೆಎಸ್ಎಸ್ ಬನಶಂಕರಿ ಆರ್ಟ್ಸ್ ಕಾಲೇಜಿನಿಂದ ಇಂಗ್ಲಿಷ್ ವಿಷಯದಲ್ಲಿ BA ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ MA ಹಾಗೂ LLB(Spl) ಪದವಿಗಳು, ಮೈಸೂರು ವಿಶ್ವವಿದ್ಯಾಲಯದಿಂದ B.Ed. ಪದವಿ ಪಡೆದಿದ್ದಾರೆ.
ರಾಜಕೀಯ ಸೇವೆ: 1995 ರಲ್ಲಿ ಬಿಜೆಪಿಗೆ ಸೇರ್ಪಡೆ ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಕಲಘಟಗಿ ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಸೇವೆ. ಈ ಅವಧಿ ಯಲ್ಲಿ ಪಕ್ಷವನ್ನು ಗ್ರಾಮ ಮಟ್ಟದಿಂದ ಸಂಘಟಿಸಿದ್ದಾರೆ. ಜನಪರ ಹೋರಾಟಗಳನ್ನು ಕೈಕೊಂಡಿದ್ದರಿಂದ ಎಲ್ಲ ವರ್ಗದ ಅವರು ರಕ್ತದೊಂದಿಗೆ ಗುರುತಿಸಿಕೊಳ್ಳುವಂತಾಯಿತು. ಈ ಕಾರ್ಯದಲ್ಲಿ ಅನೇಕರು ಇದರೊಂದಿಗೆ ಶ್ರಮ ವಹಿಸಿದ್ದಾರೆ. ಸಿ.ಎಂ. ನಿಂಬಣ್ಣವರ್ ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವುದು ಸಾಧಿಸಿದ್ದ ಸಿ.ಎಂ. ನಿಂಬಣ್ಣವರ್.2023ರಲ್ಲಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
Mahesh tenginakayi : ಸಿಎಂ ನಿಂಬಣ್ಣವರ್ ನಿಧನಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಸಂತಾಪ
C.M Nimbanna : ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಿ.ಎಂ. ನಿಂಬಣ್ಣ ನಿಧನ