Chamarajnagara News : ಹಣೆಗೆ ತಿಲಕ ಕೈಯಲ್ಲಿ ದಂಡ ಭಕ್ತಿ ಪರವಶವಾಗಿ ಕಂಡು ಬಂದ್ರು ನಮ್ಮ ರಾಜ್ಯದ ಸಿಎಂ ಅಷ್ಟೇ ಅಲ್ಲ ವಧೂ ವರರಿಗೆ ಆಶೀರ್ವಾದವನ್ನೂ ನೀಡಿದರು. ಅದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಡೀಟೈಲ್ಸ್….
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಜಾನಪದ ಕಲಾ ತಂಡಗಳಿಂದ ಪೂರ್ಣ ಕುಂಭ ಸ್ವಾಗತ ಸಿಕ್ಕಿತು.
ಮಾದಪ್ಪನ ದರ್ಶನಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ ಹಣೆಗೆ ಗಂಧದ ತಿಲಕ ಹಾಕಿಸಿಕೊಂಡು ಭಕ್ತಿ ಪರವಶವಾಗಿ ಪ್ರಾರ್ಥನೆ ಮಾಡಿದರು.
ಇದೇ ವೇಳೆ ಬೆಳ್ಳಿ ರಥಕ್ಕೆ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಿ ರಥೋತ್ಸವದಲ್ಲಿ ಭಾಗಿಯಾದರು. ದಂಡ ಹೊತ್ತು ದೇವಾಲಯವನ್ನ ಒಂದು ಸುತ್ತು ಪ್ರದಕ್ಷಿಣೆ ಹಾಕಿದರು.
ಮಾದಪ್ಪನ ದರ್ಶನ ಬಳಿಕ ಸಿಎಂ, 40 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು. ನವಜೋಡಿಗಳು ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡರು.
ಮಾಂಗಲ್ಯಸೂತ್ರ ವೇಳೆ ವರನನ್ನು ಸಿಎಂ ಕಿಚಾಯಿಸಿದ ಪ್ರಸಂಗವೂ ನಡೆಯಿತು. ಸಿಎಂ ಆಶೀರ್ವಾದ ಪಡೆಯಲು ವರ ಕೆಳಗೆ ಭಾಗಿಯಾಗಿದ್ದ ವೇಳೆ ತಲೆಯ ಮೇಲಿನ ಪೇಟ ಕೆಳಗೆ ಬಿದ್ದಿತ್ತು. ಈ ವೇಳೆ ವರನಿಗೆ ಪೇಟ ಹೇಗೆ ಧರಿಸಬೇಕು ಎಂದು ಹೇಳಿದ ಸಿಎಂ ಸರಿಪಡಿಸಿದರು. ಈ ರೀತಿ ಪೇಟಧಾರಣೆ ಮಾಡಬಾರದು ಕಣಯ್ಯ, ಹೀಗೆ ಮಾಡಬೇಕು ಎಂದು ವರನ ಪೇಟ ಸರಿ ಮಾಡಿದರು.
ವರ್ಷ ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳೇ ಮಲೆ ಮಹದೇಶ್ವರ ಪ್ರಾಧಿಕಾರದ ಅಧ್ಯಕ್ಷರಾಗುತ್ತಾರೆ. ಆದ್ರಿಂದ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು.ಈ ವೇಳೆ ಚಾಮರಾಜನಗರ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಚಿವ ಹೆಚ್.ಸಿ ಮಹದೇವಪ್ಪ, ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.
Flypver: ಚೆನ್ನಮ್ಮ ಸರ್ಕಲ್ ಬಳಿ ಪ್ಲೈಓವರ್ ನಿರ್ಮಾಣದ ಪಿಐಎಲ್ ರದ್ದು: ಹೈ ಕೋರ್ಟ್ ಆದೇಶ..!