Hubli News: ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಸೃಷ್ಟಿ ಚರ್ಚೆ ವಿಚಾರ,
ಸಿಎಂ , ಡಿಸಿಎಂ ಹುದ್ದೆ ವಿಚಾರವನ್ನ ಕಾಂಗ್ರೆಸ್ ನವರೇ ಸೃಷ್ಠಿ ಮಾಡುತ್ತಿದ್ದಾರೆ. ಡಿಸಿಎಂ ಸೃಷ್ಠಿ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ವಿಚಾರವಾಗಿ ಡಿ.ಕೆ.ಶಿವಕುಮಾರ್ ಈಗಾಗಲೇ ಉತ್ತರ ನೀಡಿದ್ದಾರೆ. ಆದ್ರೆ ಸಿದ್ಧರಾಮಯ್ಯ ಅವರು ಯಾಕೆ ಈ ಬಗ್ಗೆ ಉತ್ತರ ನೀಡುತ್ತಿಲ್ಲ.
ಡಿಸಿಎಂ ಹೇಳಿಕೆ ವಿಚಾರವಾಗಿ ಒಂದು ಕಡೆ ಡಿ.ಕೆ.ಶಿವಕುಮಾರ್ ನೋಟೀಸ್ ನೀಡೋದಾಗಿ ಹೇಳ್ತಾರೆ. ಆದ್ರೆ ಸಿದ್ಧರಾಮಯ್ಯ ಅವರ ಬಣ ಅದಕ್ಕೆ ಸವಾಲು ಹಾಕ್ತಾರೆ. ಇದನ್ನ ಗಮನಿಸಿದ್ರೆ ಅವರಲ್ಲಿನ ಬಣ ಸ್ಪಷ್ಟವಾಗುತ್ತೆ ಎಂದರು.
ಡಿಸಿಎಂ ಸೃಷ್ಠಿ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ. ಸಿದ್ಧರಾಮಯ್ಯ ಅವರೇ ಈ ವಿಚಾರವಾಗಿ ಈ ಚರ್ಚೆಯನ್ನ ಸೃಷ್ಠಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸಿದ್ಧರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಧಾರವಾಡ ಪ್ರವೇಶಕ್ಕೆ ಮತ್ತೆ ಅನುಮತಿ ಕೋರಿದ್ದ ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ
ಲಾಡ್ ಗೆ ಮಾತಿನಲ್ಲೇ ಪ್ರಹ್ಲಾದ ಜೋಶಿ ಲಾಟಿ ಚಾರ್ಜ್: ಕಾಂಗ್ರೆಸ್ ವಿರುದ್ಧ ಕಿಡಿ..!




