ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19 ಕಳಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರುಳಿಸಿ ಗೇಟ್ ದುರಸ್ತಿಗೆ ತಜ್ಞರ ತಂಡ ಚಿಂತನೆ ನಡೆಸುತ್ತಿದೆ. ಟಿಬಿ ಡ್ಯಾಂ ಪರಿಶೀಲಿಸಿದ ಹಿರಿಯ ತಜ್ಞ ಕನ್ನಯ್ಯ ನಾಯ್ಡು, ಗೇಟ್ ಅವಳಡಿಸಲು ಕನಿಷ್ಠ ಮೂರು ದಿನ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಒಮ್ಮೆಲೇ 50 ಟನ್ ತೂಕದ ಹಲಗೆಗಳನ್ನು ಕೂಡಿಸುವುದು ಕಷ್ಟ ಸಾಧ್ಯ. ತಾತ್ಕಾಲಿಕವಾಗಿ ಹೊಸ ಅಳವಿಸಲು ಕನಿಷ್ಠ ಮೂರು ದಿನ ಬೇಕಾಗುತ್ತದೆ. ಅಲ್ಲದೆ, ಒಂದೇ ಬಾರಿಗೆ ನೀರು ನಿಲ್ಲಿಸೋದು ಕಷ್ಟವಾಗುತ್ತದೆ. ಆದ್ದರಿಂದ ಇನ್ನೂ 12 ಅಡಿ ನೀರು ಕಡಿಮೆ ಆದ ನಂತರ ಗೇಟ್ ಅಳವಡಿಸೋ ಕಾರ್ಯ ನಡೆಯುತ್ತದೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತಿದೆ ಅಂತಾ ಡ್ಯಾಂ ಗೇಟ್ಗಳ ನಿಪುಣ ಕನ್ನಯ್ಯ ನಾಯ್ದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಕನ್ನಯ್ಯ ನಾಯ್ದು ಅವರ ಜೊತೆ 10 ನಿಮಿಷಗಳ ಕಾಲ ಚರ್ಚೆ ನಡೆಸಿದ್ರು. ಈ ವೇಳೆ ಮಾತನಾಡಿದ ಸಿಎಂ, ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ, ತುಂಡಾಗಿರುವ ಗೇಟ್ ದುರಸ್ತಿಗಾಗಿ 50ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಮಳೆಯಾಗಲಿದ್ದು, ಜಲಾಶಯ ಮತ್ತೆ ತುಂಬಲಿದೆ. ಹೀಗಾಗಿ, ರೈತರಿಗೆ ಯಾವುದೆ ಸಮಸ್ಯೆ ಆಗಲ್ಲ ಎಂದು ಹೇಳಿದ್ರು.