ಸಿಎಂ ಸಿದ್ದರಾಮಯ್ಯ ಅವರ ಹೊಸಮನೆ ಗೃಹ ಪ್ರವೇಶ, ಡಿಸೆಂಬರ್ನಲ್ಲಿ ನಡೆಯಲಿದೆ. ಇಷ್ಟು ದಿನ ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಮಾಡಿಕೊಂಡಿದ್ದ ವ್ಯವಸ್ಥೆ ಬಗ್ಗೆ ಸ್ವತಃ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಒಂದು ಜಿಲ್ಲೆಗೆ ಭೇಟಿ ನೀಡಿದಾಗ ಐಷಾರಾಮಿ ಹೋಟೆಲ್ ಅಥವಾ ಐಬಿಯಲ್ಲಿ ಇರುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯನವರು, ಮೈಸೂರಿಗೆ ಬಂದರೆ ಮರಿಸ್ವಾಮಿ ಎಂಬುವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರಂತೆ.
ಇದು ನನ್ನ ಅದೃಷ್ಟದ ಮನೆ ಎಂದು ಹೇಳಿಕೊಂಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಅದೃಷ್ಟ ಒದಗಿ ಬಂದಿದೆ. ಮರಿಸ್ವಾಮಿ ಅವರನ್ನು ತಮ್ಮ ಅನ್ನದಾತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು, ನನ್ನ ಸ್ನೇಹಿತರು, ನನ್ನ ಮಗ ಬಂದ್ರೆ, ಎಲ್ಲರಿಗೂ ಊಟ ಹಾಕೋನು ಅವನೇ ಎಂದು ಹೇಳಿದ್ದಾರೆ.
ಮೈಸೂರಿನ ಕುವೆಂಪು ನಗರದ ವಿಶ್ವಮಾನ ಜೋಡಿ ರಸ್ತೆಯಲ್ಲಿ, ಸಿದ್ದರಾಮಯ್ಯ ಹೊಸ ಮನೆ ಕಟ್ಟಿದ್ದಾರೆ. ಹೊಸ ಮನೆ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಮನೆ ಪೂರ್ಣಗೊಂಡ ನಂತರ ಅಲ್ಲಿಗೆ ಸ್ಥಳಾಂತರವಾಗುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.