Friday, August 29, 2025

Latest Posts

ಮೈಸೂರು ಶಾಸಕರಿಗೆ CM ಸಿದ್ದು ಆರ್ಡರ್

- Advertisement -

ಒಂದು ಕಡೆ ಸಿಎಂ ಬದಲಾವಣೆ ವಿಚಾರ ಇನ್ನು ಇತ್ಯರ್ಥ ಆಗಿಲ್ಲ. ಇನ್ನೊಂದು ಕಡೆ ದೆಹಲಿಯಲ್ಲೇ ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಅನ್ನೋ ಹೊಸ ದಾಳ ಉರುಳಿಸಿದ್ದಾರೆ. 2 ಎರಡೂ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದು ಕೂಡ ಅವರ ತವರು ಜಿಲ್ಲೆ ಮೈಸೂರಿನಲ್ಲೇ. ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಪ್ರತಿ ಕ್ಷೇತ್ರದಿಂದ 6ರಿಂದ 8 ಸಾವಿರ ಜನರನ್ನ ಕರೆತರುವಂತೆ ಶಾಸಕರಿಗೆ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ.

ಒಂದು ಬಸ್ಸಿಗೆ 6ರಿಂದ 8 ಸಾವಿರ ದುಡ್ಡು ಕೊಡ್ತೀವಿ ಜನ ಬರ್ಬೇಕು ಅಷ್ಟೇ. ಮೈಸೂರು ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿಯೇ ಈ ಮಾತು ಹೇಳಿದ್ದರು. ಇದೀಗ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಿ, ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲ್ಯಾನ್ ರೂಪಿಸಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಿಎಂ ಟಾಸ್ಕ್ ಬೆನ್ನಲ್ಲೇ ಕೈ ಶಾಸಕರು ಪೂರ್ವ ಭಾವಿ ಸಭೆ ಮಾಡಿದ್ದಾರೆ. ಜನರನ್ನು ಕರೆತರಲು ಪ್ರತಿ ಕ್ಷೇತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಬಸ್ ಪೂರೈಕೆ, ನಗರ ಕ್ಷೇತ್ರಗಳಿಗೆ ಬಸ್ ಬದಲು ಮಿನಿ ಬಸ್, ಕ್ಯಾಂಟರ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡಲು ತಯಾರಿ ಕೂಡ ನಡೆಸಲಾಗುತ್ತಿದ್ದು, ಈ ಬಗ್ಗೆ ನೆನ್ನೆ ನಡೆದ ಚಾಮರಾಜ ಕ್ಷೇತ್ರದ ಕೈ ಮುಖಂಡರ ಸಭೆಯಲ್ಲಿ ಪ್ರಶಸ್ತಿ ನೀಡುವ ಕುರಿತಾಗಿ ಸಂವಿಧಾನ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಭಾಸ್ಕರ್​ ಪ್ರಸ್ತಾಪಿಸಿದ್ದಾರೆ.

ಸಾಧನಾ ಸಮಾವೇಶ ಇರುವುದು ಜುಲೈ 19ರಂದು. ಆದರೆ ಮೂರು ದಿನ ಮೊದಲೇ ಅಂದರೆ ಜುಲೈ 17ರಂದೇ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಅಲ್ಲೇ ಠಿಕಾಣಿ ಹೂಡಲಿದ್ದಾರೆ. ಸಾಧನ ಸಮಾವೇಶದ ನೆಪದಲ್ಲಿ ತಮ್ಮ ಪರ ಇರುವ ಬೆಂಬಲವನ್ನು ಹೈಕಮಾಂಡ್​ ಹಾಗೂ ವಿರೋಧಿ ಪಾಳಯದವರಿಗೆ ತಲುಪಿಸುವುದು ಸಿದ್ದರಾಮಯ್ಯ ಉದ್ದೇಶ ಎನ್ನಲಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss