Tuesday, August 5, 2025

Latest Posts

ಮಲೆ ಮಹದೇಶ್ವರ ಅಭಿವೃದ್ಧಿ ಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

- Advertisement -

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವ ಬೆಟ್ಟಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್‌ ಅಶೋಕ್, ವಿ. ಸೋಮಣ್ಣ ಹಾಗೂ ಮತ್ತಿತರರು ಹಾಜರಿದ್ದರು.

ಆರೋಗ್ಯ ಇಲಾಖೆ ರೂಪಿಸಿರುವ 114 ‘ನಮ್ಮ ಕ್ಲಿನಿಕ್’ಗಳು ಇಂದಿನಿಂದ ಕಾರ್ಯಾರಂಭ

ಮಲೆ ಮಹದೇಶ್ವರದ ಅಭಿವೃದ್ಧಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು  ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ  ಮಲೆ ಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ತಪ್ಪಿಸಲು ಮೂರುವರೆ ಗಂಟೆ ಮೊದಲೇ ಪ್ರಯಾಣಿಕರಿಗೆ ನಿಲ್ದಾಣ ತಲುಪಲು ಸೂಚನೆ

ಬೆಟ್ಟಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿದ್ದು,  ಪ್ರತಿದಿನ ಹತ್ತರಿಂದ ಇಪ್ಪತ್ತು ಸಾವಿರ ಜನ ಭೇಟಿ ನೀಡುತ್ತಾರೆ. ಅಮಾವಾಸ್ಯೆ, ಹುಣ್ಣಿಮೆಗಳಂದು , ವಾರಾಂತ್ಯಗಳಲ್ಲಿ ಜನಸಂದಣಿ ಇನ್ನೂ ಹೆಚ್ಚಾಗುತ್ತದೆ. ಆರು ಜಾತ್ರೆಗಳು ನಡೆಯುತ್ತವೆ, ಆಗ ಲಕ್ಷಾಂತರ ಜನ ಸೇರುತ್ತಾರೆ.  ಇಲ್ಲಿ 159 ಎಕರೆ ಇದ್ದು, ಇನ್ನೂ 70 ಎಕರೆ  ಬಳಕೆಯಾಗಿಲ್ಲ. 80 ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್ ಗಳನ್ನು  ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ.  ಮೂಲ ದೇವಸ್ಥಾನದ  70 ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ದವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು  ನಿರ್ಮಿಸಬೇಕು. ಸುಮಾರು 5 ಸಾವಿರ ಜನ ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಡಿ.22 ರಂದು ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆ : ಪೂರ್ವಭಾವಿ ಸಭೆ

ಕನ್ನಡ ಹಾಗೂ ಪುನೀತ್ ಅಭಿಮಾನಕ್ಕೆ ಕಾಲಮಾನದ ಅಗತ್ಯವಿಲ್ಲ

- Advertisement -

Latest Posts

Don't Miss