Sunday, March 3, 2024

Latest Posts

ಹೆಚ್ಚುತ್ತಿರುವ ಸಚಿವ ಸ್ಥಾನಾಕಾಂಕ್ಷಿಗಳು- ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಿರುವ ಬಿಎಸ್ವೈ

- Advertisement -

ಬೆಂಗಳೂರು: ಸಚಿವ ಸಂಪುಟ ರಚನೆಗೆ ಬಿಜೆಪಿ ಸಜ್ಜಾದಾಗಿನಿಂದಲೂ ಸಚಿವ ಸ್ಥಾನಾಕಾಂಕ್ಷಿಗಳೂ ಹೆಚ್ಚುತ್ತಲೇ ಇದ್ದಾರೆ. ಕ್ಯಾಬಿನೆಟ್ ಸ್ಥಾನಕ್ಕಾಗಿ ಬಿಜೆಪಿ ಶಾಸಕರು ಈಗಾಗಲೇ ಲಾಭಿ ನಡೆಸಿದ್ದು ಮುಖ್ಯಮಂತ್ರಿ ಬಿಎಸ್ವೈಗೆ ತಲೆಬಿಸಿಯಾಗಿದೆ. ಹೀಗಾಗಿ ಯಡಿಯೂರಪ್ಪ ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಾ ಜಾಣ ನಡೆ ಅನುಸರಿಸುತ್ತಿದ್ದಾರೆ.

ರಾಜ್ಯ ಸಚಿವ ಸಂಪುಟ ರಚನೆ ಕುರಿತು ಎಚ್ಚರಿಕೆಯ ಹೆಜ್ಜೆಯಿಡುತ್ತಿರುವ ಯಡಿಯೂರಪ್ಪ, ಈಗಾಗಲೇ ಮೊದಲ ಪಟ್ಟಿ ಸಿದ್ಧಪಡಿಸಿದ್ದು 10 ಮಂದಿಗೆ ಮಾತ್ರ ಸದ್ಯಕ್ಕೆ ಸ್ಥಾನ ಕಲ್ಪಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನ ಅನರ್ಹ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ನಿರ್ಧರಿಸಿರುವ ಬಿಎಸ್ವೈ, ಅವರ ಅನರ್ಹತೆ ಕುರಿತಾಗಿ ಸುಪ್ರೀಂಕೋರ್ಟ್ ಆದೇಶ ನೋಡಿಕೊಂಡು ಮುಂದೆ ಹೆಜ್ಜೆಯಿಡಲು ತೀರ್ಮಾನಿಸಿದ್ದಾರೆ. ಆದರೆ ಈ ಮಧ್ಯೆ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿರೋದು ಸಿಎಂ ಯಡಿಯೂರಪ್ಪಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಸಚಿವ ಸ್ಥಾನ ಯಾರಿಗೆ ನೀಡಬೇಕು ಅಂತ ಹೈಕಮಾಂಡ್ ನಿರ್ಧರಿಸಲಿದ್ದು, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಅಂತ ಬಿಎಸ್ವೈ ಜಾರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿಷ್ಠುರದ ಮಾತುಗಳನ್ನಾಡಿ ಸಮಸ್ಯೆ ತಂದಿಟ್ಟುಕೊಳ್ಳೋ ಬದಲು ಯಡಿಯೂರಪ್ಪ, ನಯವಾಗಿ ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಾ, ಇದರಲ್ಲಿ ನನ್ನದೇನು ಪಾತ್ರವಿಲ್ಲ ಅಂತ ಹೇಳುವ ಮೂಲಕ ಜಾಣ ನಡೆ ಅನುಸರಿಸುತ್ತಿದ್ದಾರೆ.

ಇನ್ನು ಆಗಸ್ಟ್ 5ರಂದು ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿರುವ ಹೆಸರುಗಳನ್ನು ಅಂತಿಮಗೊಳಿಸಲಿದ್ದಾರೆ. ಹೀಗಾಗಿ ಆಗಸ್ಟ್ 5ರವರೆಗೂ ಸಂಪುಟ ರಚನೆಗೆ ಬ್ರೇಕ್ ಬಿದ್ದಿದೆ.

- Advertisement -

Latest Posts

Don't Miss