- Advertisement -
ವಾಷಿಂಗ್ಟನ್:ನೀರಲ್ಲಿ ಮುಳುಗುತ್ತಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೆಜ್ ಅವರನ್ನು ಕೋಚ್ ಆ್ಯಂಡ್ರಿಯಾ ಫುಂಟೆಸ್ ರಕ್ಷಿಸಿದ ಘಟನೆ ನಡೆದಿದೆ.
ಬುದಾಪೆಸ್ಟ್ ನಲ್ಲಿ ನಡೆಯುತ್ತಿದ್ದ ವಿಶ್ವ ಅಕ್ವೆಟಿಕ್ಸ್ ಚಾಂಪಿಯನ್ ಶಿಪ್ನನ ಅಂತಿಮ ಸುತ್ತಿನಲ್ಲಿ ಈಜುವ ವೇಳೆ ಅನಿತಾ ಅಲ್ವರೆಜ್ ಉಸಿರಾಟದ ಸಮಸ್ಯೆ ಎದುರಿಸಿ ನೀರಿನಲ್ಲಿ ಮುಳುಗಿದರು.
ಇದನ್ನು ಗಮನಿಸಿದ ಕೋಚ್ ಆ್ಯಂಡ್ರಿಯಾ ಫುನೆಟ್ಸ್ ರಕ್ಷಕ್ಕರಿಗೆ ರಕ್ಷಿಸುವಂತೆ ಕೂಗಿದರು.ಕೊನೆಗೆ ತಡವಾದಾಗ ತಾವೆ ನೀರಿಗೆ ಜಿಗಿದು 25 ವರ್ಷದ ಈಜುಗಾರ್ತಿಯನ್ನು ರಕ್ಷಿಸಿದರು.
ಉಸಿರಾಟದ ಸಮಸ್ಯೆಯಿಂದಾಗಿ ಅನಿತಾ ಅಲ್ವರೆಜ್ ಪ್ರಜ್ಞಾಹೀನಾರಾದರೆಂದು ತಿಳಿದು ಬಂದಿದೆ. ಸದ್ಯ ಅನಿತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
- Advertisement -

