Hasan story:
ಕೋರ್ಟ್ ಆವರಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಹಾಸನದ ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ ಮತ್ತು ಶಿವಕುಮಾರ್ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಈ ಹಿನ್ನೆಲೆ ಪತಿಯ ವಿರುದ್ಧ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರ ಟೌನ್ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಇರುವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ವಿರುದ್ಧವೇ ಕೋರ್ಟ್ಗೆ ಅರ್ಜಿ ಸಲ್ಲಿಸದ್ದಕ್ಕೆ ಶಿವಕುಮಾರ್ ಪತ್ನಿಯ ವಿರುದ್ಧ ಕೋಪಗೊಂಡಿದ್ದನು. ಇದನ್ನು ಲೆಕ್ಕಿಸದೆ ಚೈತ್ರಾ ನ್ಯಾಯಾಲಯಕ್ಕೆ ಹೋಗಿದ್ದಾಳೆ. ಈ ವೇಳೆ ಶಿವಕುಮಾರ್ ಆಕೆಯ ಹತ್ಯೆಗೆ ಆವರಣದಲ್ಲೇ ಹೊಂಚುಹಾಕಿದ್ದ.
ತಟ್ಟೆಕೆರೆ ಗ್ರಾಮದ ನಿವಾಸಿ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರದ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ವಿಚಾರಣೆಗೆ ಹಾಜರಾಗುವ ವೇಳೆ ಚೈತ್ರಾ ಪತಿ ಶಿವಕುಮಾರ್ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ.
ಕೋರ್ಟ್ ಆವರಣದಲ್ಲಿದ್ದ ಶೌಚಾಲಯಕ್ಕೆ ತೆರಳುತ್ತಿದ್ದ ಚೈತ್ರಾಳನ್ನು ಶಿವಕುಮಾರ್ ಅಡ್ಡಗಟ್ಟಿ ಅಮಾನುಷವಾಗಿ ಕತ್ತನ್ನು ಕೊಯ್ದಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಚೈತ್ರಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ.ಮಗುವನ್ನು ಕೊಲ್ಲಲು ಯತ್ನಿಸಿದಾಗ ಕೋರ್ಟ್ ಆವರಣದಲ್ಲಿದ್ದವರು ಮಗುವನ್ನು ರಕ್ಷಿಸಿದ್ದಾರೆ.