Manglore News : ತುಳು ನಾಡಿನಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನವಿದೆ. ನಾಗರ ಪಂಚಮಿ ತುಳುನಾಡಿನವರ ಪ್ರಥಮ ಹಬ್ಬ. ಗರ ಹಾವನ್ನು ತುಳು ನಾಡಿನಲ್ಲಿ ಪೂಜ್ಯ ಬಾವದಿಂದ ಕಾಣಲಾಗುತ್ತಿದೆ. ದಕ್ಕೇನಾದರೂ ತೊಂದರೆ ಉಂಟು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುಟ್ಟಿ ಎನ್ನುವುದು ಜನರ ನಂಬಿಕೆ.
ಆದರೆ ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿ ಇದೀಗ ಮೈ ಉರಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.
ನಾಗರ ಹಾವಿಗೆ ಡೀಸೆಲ್ ಎರಚಿದ ಕಾರಣ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಸ್ಥಳೀಯರ ಬಾಯಿಯಿಂದ ಕೇಳಿ ಹೇಳುತ್ತಿದ್ದಾರೆ.
ಒಂದು ವಾರದ ಹಿಂದೆ ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ಸಮೀಪ ಕಂಡು ಬಂದಿದ್ದ ನಾಗರ ಹಾವಿಗೆ ಉತ್ತರ ಕರ್ನಾಟಕ ಮೂಲದ ಕಾರ್ಮಿಕನೋರ್ವ ಡಿಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡ ತೊಡಗಿತ್ತು, ಕೂಡಲೇ ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿದ್ದು,ಅವರು ಹಾವಿಗೆ ಚಿಕಿತ್ಸೆ ನೀಡಿ, ಸಹಜ ಸ್ಥಿತಿಗೆ ಮರಳುವಂತೆ ಮಾಡಿದ್ದರು.
ಆದರೆ ನಾಗರ ಹಾವಿಗೆ ಡೀಸೆಲ್ ಎರಚಿದಾತ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಗರ ಹಾವಿಗೆ ಡೀಸೆಲ್ ಎರಚಿದ ಕಾರಣವೇ ಈ ರೀತಿ ಆಗಿದೆ ಎಂದು ಊರವರು ಹೇಳುತ್ತಿದ್ದಾರೆ. ಒಟ್ಟಾರೆ ತುಳುನಾಡ ದೇವರ ದೈವ ಶಕ್ತಿ ಮತ್ತೆ ಸಾಬೀತಾಗಿದೆ.
Hubli news: ಸಿದ್ದರಾಮಯ್ಯ ಸರ್ಕಾರ ಎಲ್ಲರ ಮತಗಳನ್ನು ತೆಗೆದುಕೊಂಡು ಅಧಿಕಾರಕ್ಕೆ ಬಂದಿದೆ; ಅರವಿಂದ್ ಬೆಲ್ಲದ್.!
Ganesh Fest : ಹುಬ್ಬಳ್ಳಿಯಲ್ಲಿ ಸಿದ್ಧವಾದ 12 ಲಕ್ಷ ಮೌಲ್ಯದ ಅಮೇರಿಕನ್ ಡೈಮಂಡ್ ಗಣಪತಿ: ಬೆಂಗಳೂರಿಗೆ ರವಾನೆ