Friday, April 4, 2025

Latest Posts

ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿಕೆ

- Advertisement -

ಬೆಂಗಳೂರು: ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿದ್ದು, ಕೋಮುವಾದಿ ಶಕ್ತಿ ಮಣಿಸಬೇಕಾಗಿದೆ, ಜನರು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಎನ್ನುವ ತೀರ್ಮಾನಕ್ಕೆ ಬಂದರು. ಕಡೂರು ಕ್ಷೇತ್ರದ ಸ್ವರೂಪ ಬೇರೆ ಕ್ಷೇತ್ರಕ್ಕಿಂತ ವಿಭಿನ್ನವಾಗಿದೆ. ಜಾತಿ‌ನೆಲಗಟ್ಟು ಇಲ್ಲ, ಹಣ ಬಲ ಇಲ್ಲ, ಹಾಗಾಗಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿದೆ ಎಂದು ಹೇಳಿದರು.

ಜೆಡಿಎಸ್ ಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ನತ್ತ ಮುಖ ಮಾಡಿದ ವೈ.ಎಸ್.ವಿ ದತ್ತಾ

ನನ್ನದು ಮತ್ತು ದೇವೇಗೌಡ ಅವರ ರಾಜಕೀಯ 50 ವರ್ಷ ಸುದೀರ್ಘವಾದುದ್ದು, ದೇವೇಗೌಡರ ಜೊತೆಗೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿಗೆ ತಂದೆ ಮಗನ ಸಂಬಂಧವಿದೆ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದ್ರೆ ಕ್ಷೇತ್ರ ರಾಜಕೀಯವಾಗಿ ಮತ್ತು ಕಾರ್ಯಕರ್ತರ ಒತ್ತಾಯದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಒತ್ತಾಯ ಬಂದಿದೆ. ನಾನು ದೇವೇಗೌಡರಿಗೆ ಈ ವಿಚಾರ ಹೇಳಲು ಹೋಗಿ ವಾಪಸ್ ಬಂದಿದ್ದೇನೆ. ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣಸಬೇಕು ಅಂದರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ.

ನಾಳೆ ನಡೆಯುವ ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್ ವೈಗೆ ಅಧಿಕೃತ ಆಹ್ವಾನವಿಲ್ಲ

ಪ್ರಜ್ವಲ್ ಎಂಪಿಗೆ ಸ್ವರ್ಧೆ ಮಾಡಿದಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಇದ್ದರೂ ಕೂಡ ಬಿಜೆಪಿಗೆ ಹೆಚ್ಚು ವೋಟ್ ಬಂದಿದೆ. ಜನರು ಕೋಮುವಾದ ಶಕ್ತಿ ಮಣಿಸಲು ಕಾಂಗ್ರೆಸ್ ಸೇರ್ಪಡೆಯಾಗಬೇಕು ಎಂದು ಹೇಳಿದ್ದಾರೆ. ಕ್ಷೇತ್ರದೊಳಗಡೆ ಕೊನೆ ಹೋರಾಟ ಆಗಿದೆ. ಆದರೆ ನನ್ನ ನಂಬಿ ಬಂದವರು ಅತಂತ್ರ ಆಗಬಾರದು ಎಂದು ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆ ಯಾಗುತ್ತಿದ್ದೇನೆ ಎಂದು ದತ್ತಾ ಹೇಳಿದ್ದಾರೆ.

ಗಡಿವಿಚಾರದ ಬಗ್ಗೆ ರಾಜ್ಯ ಅಚಲ ನಿಲುವು : ಸಿಎಂ ಬಸವರಾಜ ಬೊಮ್ಮಾಯಿ

ಹುಲಿ ಯೋಜನೆ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss