Thursday, May 1, 2025

Latest Posts

ಬರ್ತ್ ಡೇ ದಿನ ನಟ ಶರಣ್ ಫ್ಯಾನ್ಸ್ ಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್…!

- Advertisement -


ಕಾಮಿಡಿ ಕಿಂಗ್ ಶರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಶರಣ್ ಬರ್ತ್ ಡೇ ಸ್ಪೆಷಲ್ ಆಗಿ ಅವರು ನಟಿಸಿರುವ ‘ಅವತಾರ ಪುರುಷ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದ ಮೇಲೆ ಸಾಕಷ್ಟು ಹೋಪ್ ಕ್ರಿಯೇಟ್ ಆಗಿದೆ. ವಿಶೇಷ ಅಂದ್ರೆ ಇವತ್ತು ‘ಅವತಾರ ಪುರುಷ’ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಇಂದೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಶರಣ್ ಫ್ಯಾನ್ಸ್ ಗೆ ಸಖತ್ ಖುಷಿ ಕೊಟ್ಟಿದೆ.

ಮೇ 28ಕ್ಕೆ ಬೆಳ್ಳಿಪರದೆಗೆ ಶರಣ್ ‘ಅವತಾರ ಪುರುಷ’ ಸಿನಿಮಾ ಎಂಟ್ರಿ ಕೊಡಲಿದೆ ಎಂದು ಚಿತ್ರತಂಡ ಅಧಕೃತವಾಗಿ ಪ್ರಕಟಿಸಿದೆ.         

‘ಅವತಾರ ಪುರುಷ’ ಹೆಸರಿಕ್ಕೆ ತಕ್ಕಂತೆ ಟೀಸರ್ ನಲ್ಲಿ ಶರಣ್ ವಿಭಿನ್ನ ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇನ್ನು, ಸಿನಿಮಾವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಎರಡು ಭಾಗದಲ್ಲಿಯೂ ನಟ ಶರಣ್ ಗೆ ಜೋಡಿಯಾಗಿ ಆ್ಯಪಲ್ ಬ್ಯೂಟಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹಿರಿಯ ನಟಿ ಸುಧಾರಾಣಿ, ಭವ್ಯ, ಸಾಯಿಕುಮಾರ್, ಸಾಧು ಕೋಕಿಲಾ, ಶ್ರೀನಗರ ಕಿಟ್ಟಿ ಸಿನಿಮಾದಲ್ಲಿ ನಟಿಸಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

- Advertisement -

Latest Posts

Don't Miss