Thursday, October 30, 2025

Latest Posts

ಕಾವೇರಿ ಆರತಿ ವೈಭವ ನೋಡ ಬನ್ನಿ..

- Advertisement -

ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ, “ಕಾವೇರಿ ಆರತಿ” ಮಾಡಲಾಗ್ತಿದೆ. ಸೆಪ್ಟೆಂಬರ್ 26ರ ಶುಕ್ರವಾರದಿಂದ 5 ದಿನಗಳ ಕಾಲ‌, ಬೃಂದಾವನ ಉದ್ಯಾನವನದಲ್ಲಿ ನೆರವೇರಲಿದೆ. ಮಧುವಣಗಿತ್ತಿಯಂತೆ ಕೆಆರ್‌ಎಸ್‌ ಸಿಂಗಾರಗೊಂಡಿದೆ. ಇಂದು ಸಂಜೆ 6 ಗಂಟೆಗೆ ಕಾವೇರಿ ನದಿಗೆ ಪುಷ್ಪಾರ್ಚನೆ ಮೂಲಕ, ಕಾವೇರಿ ಆರತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಚಾಲನೆ ನೀಡಲಿದ್ದಾರೆ.

ತರಬೇತಿ ಪಡೆದ 12ರಿಂದ 13 ಮಂದಿ ಪುರೋಹಿತರು, ಕಾವೇರಿ ಆರತಿ ನೆರವೇರಿಸಲಿದ್ದಾರೆ. ಕಾವೇರಿ ಆರತಿ ವೀಕ್ಷಣೆಗೆ ಪ್ರತಿನಿತ್ಯ 8ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು, ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಪ್ರಸಾದ ರೂಪದಲ್ಲಿ ಹಂಚಲು ಲಾಡು ಮಾಡಿಸಲಾಗಿದೆ.

ಕಾವೇರಿ ಆರತಿ ಹಿನ್ನೆಲೆ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಟೋಲ್‌ ಸಂಗ್ರಹದಲ್ಲೂ ವಿನಾಯಿತಿ ನೀಡಲಾಗಿದೆ. 5 ದಿನಗಳ ಕಾಲ ಟಿಕೆಟ್‌ ಮತ್ತು ಟೋಲ್‌ ಇರುವುದಿಲ್ಲ. ಪ್ರವಾಸಿಗರಿಗಾಗಿ ಕಾವೇರಿ ನೀರಾವರಿ ನಿಗಮದಿಂದ, ಮಂಡ್ಯ-ಪಾಂಡವಪುರ-ಶ್ರೀರಂಗಪಟ್ಟಣದ ಸ್ಥಳೀಯರಿಗಾಗಿ, ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಕಾವೇರಿ ಆರತಿ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಕಾವೇರಿ ಆರತಿಗೆ ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ ಕೇಸ್‌ ಇದೆ. ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡ್ತೇವೆ. ಸದ್ಯ, ಇರುವ ಉತ್ತಮ ಜಾಗದಲ್ಲೇ ಕಾವೇರಿ ಆರತಿಗೆ ವ್ಯವಸ್ಥೆ ಮಾಡಲಾಗಿದೆ ಎಂದ್ರು.

- Advertisement -

Latest Posts

Don't Miss