Friday, December 27, 2024

Latest Posts

ಜೂನ್ 19 ರಂದು ಕಾಮೆಡ್ ಕೆ ಪರೀಕ್ಷೆ!

- Advertisement -

ಬೆಂಗಳೂರು: ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ದೇಶದ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ ( ಕಾಮೆಡ್- ಕೆ) ಜೂನ್ 19 ಕ್ಕೆ ಯುಜಿಇಟಿ -2022 ಪರೀಕ್ಷೆ ನಡೆಸಲಿದೆ.

ದೇಶಾದ್ಯಂತ 154 ನಗರಗಳ 230 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜೂನ್ 19 ರಂದು ಬೆಳಗ್ಗೆ 9 ರಿಂದ 12 ಮತ್ತು ಮಧ್ಯಾಹ್ನ 2.30 ರಿಂದ 5.30ರ ವರೆಗೆ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ 61,635 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 66 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ನೋಂದಾಯಿತ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ಕಾಮೆಡ್- ಕೆ ವೆಬ್ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶ ಪತ್ರದ ಜೊತೆಗೆ ಮಾನ್ಯತೆ ಹೊಂದಿರುವ ಗುರುತಿನ ಚೀಟಿ, ಪಾಸ್ ಪೋರ್ಟ್ ಅಳತೆಯ ಎರಡು ಕಲರ್ ಪೋಟೋವನ್ನು ತರಬೇಕು. ಹಾಗೂ ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ಸೂಚಿಸಲಾಗಿದೆ.

 

- Advertisement -

Latest Posts

Don't Miss