Thursday, July 31, 2025

Latest Posts

ಫೇಸ್‌ಬುಕ್ ಕಾಮೆಂಟ್ ಬಗ್ಗೆ ನಯನಾ ಹೇಳಿದ್ದೇನು..?

- Advertisement -

ಫೇಸ್‌ಬುಕ್‌ನಲ್ಲಿ ಇಂಗ್ಲಿಷ್‌ನಲ್ಲಿ ಕೆಲ ವಾಕ್ಯಗಳನ್ನ ಅಪ್ಲೋಡ್ ಮಾಡಿದ್ದಕ್ಕೆ ಕಾಮಿಡಿ ಖಿಲಾಡಿಗಳು ಖ್ಯಾತಿಯ ನಯನಾ ಕೆಲ ನೆಟ್ಟಿಗರ ಕೋಪಗೊಂಡಿದ್ದರು. ಈ ಬಗ್ಗೆ ಕಾಮೆಂಟ್ ಮಾಡಿದ್ದ ಓರ್ವ ಹೆಸರು ಮಾಡಿಕೊಳ್ಳುವ ತನಕ ಕನ್ನಡ ಬೇಕು ನಂತರ ಬೇಡ ಎನ್ನುವಂತೆ ಕಾಮೆಂಟ್ ಮಾಡಿದ್ದ.

ಇದಕ್ಕೆ ರಿಪ್ಲೈ ಕೊಟ್ಟಿದ್ದ ನಯನಾ ಅಪ್ಪ ಕನ್ನಡದ ಅಪ್ಪಟ ಅಭಿಮಾನಿ ಮುಚ್ಕೊಂಡ್ ನಿನ್ ಕೆಲ್ಸಾ ನೋಡು ಅಂತಾ ಹೇಳಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ಬಿಸಿ ಬಿಸಿ ನ್ಯೂಸ್‌ನಂತೆ ಎಲ್ಲೆಡೆ ಹಬ್ಬಿದೆ. ಈ ಪೋಸ್ಟನ್ನ ಹಲವರು ಶೇರ್ ಮಾಡಿ ನಯನಾಗೆ ಭಾರೀ ದುರಹಂಕಾರ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಈ ಕಾರಣಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬಂದು ಹೇಳಿಕೆ ಕೊಟ್ಟಿರುವ ನಯನಾ, ತನ್ನ ತಪ್ಪನ್ನ ಕ್ಷಮಿಸಿ, ನಿಮ್ಮ ತಪ್ಪನ್ನ ತಿದ್ದುಕೊಳ್ಳಿ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಯನಾ, ಎಲ್ಲರಿಗೂ ನಮಸ್ತೆ ನಾನು ನಿಮ್ಮ ನಯನಾ ಮಾತನಾಡ್ತಿರೋದು. ಮೊದಲು ನಾನು ಎಲ್ಲ ಅಪ್ಪಟ ಕನ್ನಡಾಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ. ಈ ಕ್ಷಮೆ ಕೇಳಲು ಕಾರಣವೇನೆಂದರೆ ಎಂದು ಈ ಮೇಲಿನಂತೆ ನಡೆದ ಘಟನೆಯನ್ನು ನಯನಾ ವಿವರಣೆ ನೀಡಿದ್ದಾರೆ.

ಅಲ್ಲದೇ, ನಾನೆಲ್ಲೂ ಇಂಗ್ಲಿಷ್ ಮೇಲೆ ವ್ಯಾಮೋಹವಿದೆ ಎಂದು ಹೇಳಲಿಲ್ಲ. ಇಂಗ್ಲಿಷ್ ನಮಗೆ ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಎಂದಿದ್ದಾರೆ. ಅಲ್ಲದೇ ನಾನು ನನ್ನ ತಪ್ಪಿಗೆ ಕ್ಷಮೆ ಕೇಳುತ್ತೇನೆ. ನೀವು ನಿಮ್ಮ ತಪ್ಪನ್ನ ಅರಿತುಕೊಳ್ಳಿ ಎಂದು ಕಾಮೆಂಟ್ ಮಾಡಿದವರಿಗೆ ಹೇಳಿದ್ದಾರೆ.

- Advertisement -

Latest Posts

Don't Miss