Saturday, July 27, 2024

Latest Posts

ಚಿಕ್ಕಬಳ್ಳಾಪುರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

- Advertisement -

www.karnatakatv.net : ಚಿಕ್ಕಬಳ್ಳಾಪುರ : ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರು ಇಂದು ಚಿಕ್ಕಬಳ್ಳಾಪುರ ನಗರದಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಉದ್ಘಾಟನೆ ಮಾಡಿದ್ರು. ಇದೇ ಸಂದರ್ಭದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ರೂ.18.63 ವೆಚ್ಚದಲ್ಲಿ 12 ಜನ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಆಟೋಗಳನ್ನು ವಿತರಿಸಿದ್ರು.

ನಂತರ ಆರೋಗ್ಯ ಇಲಾಖೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ 500 ಜನರ ಪರೀಕ್ಷಾ ಸಾಮರ್ಥ್ಯದ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯವನ್ನು ಉದ್ಘಾಟಿಸಿದ್ರು. ಹಾಗೂ ನಗರಸಭೆಯ 29 ಜನ ಪೌರ ಕಾರ್ಮಿಕರಿಗೆ 14 ನೇ ವಾರ್ಡ್ ಕಂದವಾರ ಬಳಿ ಉಚಿತ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಿದ ಸಚಿವರು ನಂತರ ಮುಖ್ಯ ಮಂತ್ರಿಗಳ ವಿಶೇಷ ನಿಧಿಯಲ್ಲಿ 3.0 ಕೋಟಿ ವೆಚ್ಚದಲ್ಲಿ ನಗರದ 18 ನೇ ವಾರ್ಡ್, ಐ.ಡಿ.ಎಸ್.ಎಂ.ಟಿ, ಮದ್ದೂರಪ್ಪ ಬಡಾವಣೆ ಹಾಗೂ ಒಂದನೇ ವಾರ್ಡ್ ವಾಪಸಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಕ್ ಗಳನ್ನು ಮಾನ್ಯ ಸಚಿವರು ಉದ್ಘಾಟಿಸಿ, ಐಡಿಎಸ್ಎಸಂಟಿ ಸುತ್ತು ನಿಧಿ ರೂ.3.0 ಕೋಟಿ ವೆಚ್ಚದಲ್ಲಿ ಐಡಿಎಸ್ಎಂಟಿ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2.0 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಣ್ಣ ನೀರಾವರಿ ಇಲಾಖೆಯಿಂದ ಹೆಚ್.ಎನ್.ವ್ಯಾಲಿ ನೀರಿನ ಐದನೇ ಹಂತದ ಬಿಡುಗಡೆಗೆ ಚಾಲನೆ ನೀಡಿ, ಅಮಾನಿ ಗೋಪಾಲಕೃಷ್ಣ ಕೆರೆಗೆ ಹೆಚ್.ಎನ್.ವ್ಯಾಲಿ ನೀರನ್ನು ಬಿಡುಗಡೆ ಮಾಡಿದ್ರು. ನಗರಸಭೆ ವಸತಿಹೀನ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಿ ಎಸ್.ಎಫ್.ಸಿ ಹಾಗೂ ಮುನಿಸಿಪಲ್ ಅನುದಾನದಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 149 ಜನ ವಿದ್ಯಾರ್ಥಿಗಳಿಗೆ 8.47 ಲಕ್ಷ ಮೊತ್ತದ ಸಹಾಯಧನವನ್ನು ವಿತರಿಸಿದ್ರು.

     ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿ಼ಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್, ತಾ.ಪಂ ಅಧ್ಯಕ್ಷರಾದ ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಎಂ.ಎಫ್.ಸಿ ನಾರಾಯಣಸ್ವಾಮಿ, ಗಜೇಂದ್ರ, ಕೆ.ವಿ.ನಾಗರಾಜ್, ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಜರಿದ್ದರು.

ಕರ್ನಾಟಕ ಟಿವಿ, ಚಿಕ್ಕಬಳ್ಳಾಪುರ

- Advertisement -

Latest Posts

Don't Miss