www.karnatakatv.net : ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಮೇಜರ್ ಸರ್ಜರಿ ಈಗ ಚುರುಕುಗೊಂಡಿದ್ದು, ಸುಮಾರು ವರ್ಷಗಳಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಲಾಭುರಾಮ್ ಅವರು ಚುರುಕು ಮುಟ್ಟಿಸಿದ್ದಾರೆ.

ಹೌದು..ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ 198 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಮಿಷನರೇಟ್ ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಲಾಭೂರಾಮ ನೇತೃತ್ವದಲ್ಲಿ ವೈಯಕ್ತಿಕ ಕೌನ್ಸೆಲಿಂಗ್ ನಡೆಯಿತು. 11 ಎಎಸ್ಐ, 53 ಹೆಡ್ ಕಾನ್ ಸ್ಟೇಬಲ್ ಹಾಗೂ 128 ಕಾನ್ಸ್ಟೇಬಲ್ ಗಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಯಿತು.

ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಿಭಾಗದಿಂದ ಸಿಬ್ಬಂದಿ ಕೇಳಿದ ಮತ್ತೊಂದು ಉಪ ವಿಭಾಗಕ್ಕೆ ವರ್ಗಾವಣೆಗೆ ಸೂಚಿಸಿದರು. ಬಹುತೇಕ ಸಿಬ್ಬಂದಿ ಧಾರವಾಡದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಧಾರವಾಡಕ್ಕೆ ವರ್ಗಾವಣೆಗೊಳ್ಳಲಿದ್ದಾರೆ. ಸಂಚಾರ ಠಾಣೆ ಸಿಬ್ಬಂದಿ ಸೇರಿ ಹಲವರಿಗೆ ಆಯುಕ್ತರು ಶಾಕ್ ನೀಡಿದ್ದಾರೆ.
ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ವಿವರ ನೀಡುವಂತೆ ಕಳೆದ ವಾರ ಪೊಲೀಸ್ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಮಾಹಿತಿ ಅನ್ವಯ ಸಂಖ್ಯೆ ಹೆಚ್ಚಿರುವ ಕಾರಣ ಆಯುಕ್ತರು, ಆರು ವರ್ಷಕ್ಕಿಂತ ಹೆಚ್ಚು ಕಾಲ ವಿಭಾಗದಿಂದ ಮತ್ತೊಂದು ಉಪ ವಿಭಾಗಕ್ಕೆ ಒಂದೇ ಠಾಣೆಯಲ್ಲಿರುವ 198 ಸಿಬ್ಬಂದಿಗಳ ವರ್ಗಾವಣೆಗೆ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸ್ ಆಯುಕ್ತ ಲಾಭುರಾಮ್ ಒಂದೊಂದೇ ಕೆಲಸವನ್ನು ಕೈಗೆತ್ತಿಕೊಳ್ಳುವ ಮೂಲಕ ಇಲಾಖೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ.

