Sunday, October 5, 2025

Latest Posts

ಕರೂರ್ ರ್ಯಾಲಿ ದುರಂತ – ಮೃತರಿಗೆ ಪರಿಹಾರ ಘೋಷಣೆ!!!

- Advertisement -

ತಮಿಳು ನಟ ಹಾಗೂ TVK ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ನೇತೃತ್ವದಲ್ಲಿ
ಕರೂರಿನಲ್ಲಿ ರಾಜಕೀಯ ರ‍್ಯಾಲಿ ನಡೆದಿದೆ. ಸೆಪ್ಟೆಂಬರ್ 27 ರಂದು ಉಂಟಾದ ಭೀಕರ ಕಾಲ್ತುಳಿತದಲ್ಲಿ 39 ಮಂದಿ ದುರ್ಮರಣಕ್ಕೆ ಒಳಗಾಗಿದ್ದಾರೆ. 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದುರಂತದ ಕುರಿತು ದಳಪತಿ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಮಾಹಿತಿ TVK ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪ್ರಕಟಿಸಲಾಗಿದೆ.

ಶನಿವಾರ ನಡೆದ ಈ ದುರಂತದಿಂದ ನಾನು ತೀವ್ರವಾಗಿ ಕಂಗಾಲಾಗಿದ್ದೇನೆ. ಈ ದುಃಖವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ಈ ನಷ್ಟಕ್ಕೆ ಯಾವುದೇ ಮೊತ್ತದ ಪರಿಹಾರ ಸಮಾನವಾಗಲಾರದು. ಆದರೂ, ಒಂದು ಕುಟುಂಬದ ಸದಸ್ಯನಾಗಿ, ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಹಾಗೂ ಗಾಯಾಳುಗಳಿಗೆ ₹2 ಲಕ್ಷ ಪರಿಹಾರ ಘೋಷಿಸುತ್ತಿದ್ದೇನೆ.

ಇದು ದೊಡ್ಡ ಪರಿಹಾರವಲ್ಲ ಎಂಬುದು ನನಗೆ ತಿಳಿದಿದೆ. ಆದರೆ, ಈ ಸಂಕಷ್ಟದ ಸಂದರ್ಭದಲ್ಲಿ ನಿಮ್ಮೊಂದಿಗಿರುವುದು ನನ್ನ ಕರ್ತವ್ಯವೆಂದು ನಂಬಿದ್ದೇನೆ. ಎಲ್ಲ ಗಾಯಾಳುಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಚಿಕಿತ್ಸೆಗೆ ಅಗತ್ಯ ನೆರವನ್ನೂ ನೀಡುತ್ತೇನೆ ಎಂದು ವಿಜಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಭೀಕರ ಘಟನೆ ರಾಜಕೀಯಕ್ಕೆ ಹೊಸದಾಗಿ ಕಾಲಿಟ್ಟಿರುವ ದಳಪತಿ ವಿಜಯ್ ಅವರಿಗೆ ಆರಂಭದಲ್ಲೇ ಹಿನ್ನಡೆ ಆದಂತಿದೆ. ಸುಮಾರು 60 ಸಾವಿರ ಮಂದಿ ಭಾಗವಹಿಸಿದ್ದ ಈ ರ‍್ಯಾಲಿಯಲ್ಲಿ ಸಂಭವಿಸಿದ ಅವ್ಯವಸ್ಥೆಯಿಂದಾಗಿ ಇಷ್ಟು ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss