ಸಿನಿಮಾ ಸುದ್ದಿ:
ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಮ್.ಎನ್ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು. ಈ ಬಗ್ಗೆ ನಟ ಕಿಚ್ಚ ಸುದೀಪ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಟ್ವಿಟ್ಟರ್‌ನಲ್ಲಿ ನಟ ಸುದೀಪ್ ಅವರು ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು, ನಿರ್ಮಾಪಕ ಎಮ್ ಎನ್ ಕುಮಾರ್ ಕಿಚ್ಚ ಸುದೀಪ್ ಅವರ ಜೊತೆಗೆ ರಂಗ SSLC, ಕಾಶಿ, ಮಾಣಿಕ್ಯ ಮತ್ತು ಮುಕುಂದ ಮುರಾರಿ ಸಿನಿಮಾದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಇದಲ್ಲದೆ ನಟ ಸುದೀಪ್ ಅವರ ಹಲವು ಸಿನಿಮಾಗೆ ವಿತರಕರಾಗಿ ಕೆಲಸ ಮಾಡಿದ್ದಾರೆ. ಆದರೆ ಕಿಚ್ಚ ವಿಕ್ರಾಂತ್ ರೋಣ ಸಿನಿಮಾದ ನಂತರ ನನ್ನ ಸಿನಿಮಾಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ. ಕೋಟಿಗೊಬ್ಬ-3, ಪೈಲ್ವಾನ್ ನಂತರ ನಿಮ್ಮ ಸಿನಿಮಾ ಮಾಡುತ್ತೇನೆ ಎಂದಿದ್ದರು ಅದು ಸಹ ಆಗಲಿಲ್ಲ. ‘ವಿಕ್ರಾಂತ್ ರೋಣ’ ಬಳಿಕ ನಿಮಗೆ ಮಾಡುತ್ತೇನೆ ಎಂದಿದ್ದರು. ಈಗ ಅವರು ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ