Tuesday, May 30, 2023

Latest Posts

ಗೋಡೆ ಹಾರಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಂಧಿಸಿದ ಸಿಬಿಐ..!

- Advertisement -

ಕರ್ನಾಟಕ ಟಿವಿ : ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಪಿ ಚಿದಂಬರಂ ಬಂಧನ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಪಿ ಚಿದಂಬರಂ ಬಂಧಿಸಲು ದೆಹಲಿಯ ನಿವಾಸಕ್ಕೆ ತೆರಳಿದಾಗ ಮನೆಯ ಬಾಗಿಲು ತೆಗೆಯದೆ ಅರ್ಧ ಗಂಟೆಗಳ ಹೈಡ್ರಾಮಾ ನಡೆದಿದೆ. ನಂತರ ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆ ಪ್ರವೇಶಿ  ಅಧಿಕಾರಿಗಳು ಚಿದಂಬರಂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ್ರು. ಹರಸಾಹಸ ನಡೆಸಿ ಪಿ ಚಿದಂಬರಂ ಬಂಧಿಸಿದ ಅಧಿಕಾರಿಗಳು ಸಿಬಿಐ ಕಚೇರಿಗೆ ಭಾರೀ ಭದ್ರತೆಯಲ್ಲಿ ಕರೆದೊಯ್ದಿದ್ದಾರೆ.

ಕಾಂಗ್ರೆಸ್ ನಾಯಕನಿಗೆ ಸಿಕ್ಕಿರಲಿಲ್ಲ ಜಾಮೀನು..!

ಇನ್ನು ಸಿಬಿಐ ಬಂಧಿಸುತ್ತೆ ಅಂತ ಗೊತ್ತಾದ ಪಿ ಚಿದಂಬರಂ ದೆಹಲಿ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಕೋರ್ಟ್  ಜಾಮೀನು ನೀಡಲು ನಿರಾಕರಿಸಿತ್ತು. ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಚಿದಂಬರಂ ಗೆ ಅಲ್ಲೂ ಕೂಡ ಹಿನ್ನಡೆಯಾಗಿತ್ತು. ಜಾಮೀನು ಅರ್ಜಿಯನ್ನ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ನಿರಾಕರಿಸಿತ್ತು.

ಒಟ್ಟಾರೆ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಹಲವು ಹಗರಣಗಳಲ್ಲಿ ಐಎನ್ ಎಕ್ಸ್ ಹಗರಣ ಕೂಡ ದು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ2ಜಿ ಸ್ಪೆಕ್ಟ್ರಂ ಹಗರಣ ಹಾಗೂ ಕಾಮನ್ ವೆಲ್ತ್ ಹಗರಣ ಕಾಂಗ್ರೆಸ್ ಹಾಗೂ ಡಿಎಂಕೆ ನಾಯಕರು ಜೈಲು ಸೇರುವಂತೆ ಮಾಡಿತ್ತು. ಇದೀಗ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪಿ ಚಿದಂಬರಂ ಜೈಲು ಸೇರುವ ಮೂಲಕ ಕಾಂಗ್ರೆಸ್ ನಾಯಕರ ಜೈಲು ಯಾತ್ರೆ ಮುಂದುವರೆದಿದೆ.

- Advertisement -

Latest Posts

Don't Miss