Rudrappa lamani ಬಿಜೆಪಿಯ ಮಾಜಿ ಶಾಸಕ ಕಾಂಗ್ರೆಸ್ ಸೇರೋದು ಫಿಕ್ಸ್..!

ಗದಗ: ಶಿರಹಟ್ಟಿಯ ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆಯಾಗೋದು ಬಹುತೇಕ ಖಚಿತವಾಗಿದೆ. ಕರ್ನಾಟಕ ಟಿವಿ ಜೊತೆ ಮಾತನಾಡಿದ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಚರ್ಚೆ ಸಹ ನಡೆಸಿದ್ದೇನೆ. ನನ್ನನ್ನು ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಹೇಳೋದಾಗಿ ತಿಳಿಸಿದ್ದು, ಅವರ ಸಮ್ಮುಖದಲ್ಲಿ ಬೆಂಬಲಿಗರೊಂದಿಗೆ ಪಕ್ಷ ಸೇರುವೆ ಎಂದು ಹೇಳಿದರು.

ಕಾಂಗ್ರೆಸ್ ಸೇರುವ ಕಾರ್ಯಕ್ರಮ ಇನ್ನು ಒಂದು ತಿಂಗಳು ತಡವಾಗಬಹುದು. ಚಿಕ್ಕನಗೌಡ, ಕುಮಾರಸ್ವಾಮಿ, ಪುರ್ಣಿಮಾ, ಯಾದವಾಡ, ಸೇರಿದಂತೆ ಇನ್ನು 15 ಜನರು ಕಾಂಗ್ರೆಸ್ ಸೇರಲಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಿದ್ದೇನೆ. ಆದರೂ ನನಗೆ ಟಿಕೆಟ್ ತಪ್ಪಿಸಲಾಯ್ತು ಎಂದು ಬೇಸರ ಹೊರ ಹಾಕಿದರು.

Hindu maha ganapathi: ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಅದ್ದೂರಿ ವಿಸರ್ಜನೆ ಕಾರ್ಯಕ್ರಮ..!

ಚಾಮರಾಜನಗರ : ಮಲೆಮಹದೇಶ್ವರನ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ

Flypver: ಚೆನ್ನಮ್ಮ ಸರ್ಕಲ್ ಬಳಿ ಪ್ಲೈಓವರ್ ನಿರ್ಮಾಣದ ಪಿಐಎಲ್ ರದ್ದು: ಹೈ ಕೋರ್ಟ್ ಆದೇಶ..!

About The Author