National News:
ಕಾಂಗ್ರೆಸ್ ಹಾಗು ಬಿಜೆಪಿ ಮದ್ಯೆ ಇದೀಗ ಟೀ ಶರ್ಟ್ ವಾರ್ ಶುರುವಾಗಿದೆ. ಟ್ವೀಟ್ ಮೂಲಕ ಎರಡು ಪಕ್ಷಗಳು ಬಡಿದಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ರ‍್ಟ್ ಬಗ್ಗೆ ಎಲ್ಲೆಲ್ಲೂ ರ‍್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ೪೧ ಸಾವಿರ ರೂಪಾಯಿ ಮೌಲ್ಯದ ಟೀ ರ‍್ಟ್ ಧರಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ. ರಾಹುಲ್ ಗಾಂಧಿ ಟಿ-ಶರ್ಟ್ ಧರಿಸಿದ್ದರು, ಅದರ ಬೆಲೆ 41000 ರೂ.ಗಿಂತ ಹೆಚ್ಚು ಎಂದು ಆರೋಪಿಸಲಾಗಿದೆ, ಇದಕ್ಕಾಗಿ ಬಿಜೆಪಿ ಈಗ ಅವರನ್ನು ಗುರಿಯಾಗಿಸಿದೆ. ಬಿಳಿ ರ‍್ಬೆರಿ ಟಿ-ಶರ್ಟ್ ಧರಿಸಿರುವ ರಾಹುಲ್ ಗಾಂಧಿ ಚಿತ್ರವನ್ನು ಬಿಜೆಪಿ ಹಂಚಿಕೊಂಡಿದೆ ಮತ್ತು ಅದಕ್ಕೆ ಭಾರತ, ನೋಡಿ ಎಂದು ಕ್ಯಾಪ್ಶನ್ ನೀಡಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನಸಮೂಹವನ್ನು ನೋಡಿ ನಿಮಗೆ ಭಯ ಆಗುತ್ತಿದೆಯೇ? ಸಮಸ್ಯೆಯ ಬಗ್ಗೆ ಮಾತನಾಡಿ, ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ. ನೀವು ಬಟ್ಟೆಯ ಬಗ್ಗೆ ರ‍್ಚಿಸಬೇಕಾದರೆ, ಮೋದಿ ಅವರ ೧೦ ಲಕ್ಷ ಬೆಲೆಯ ಸೂಟ್ ಮತ್ತು ೧.೫ ಲಕ್ಷ ರೂ. ಬೆಲೆಯ ಕನ್ನಡಕದ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
Bharat, dekho! pic.twitter.com/UzBy6LL1pH
— BJP (@BJP4India) September 9, 2022