ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”

Political story

ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುತ್ತಾ ಬರುತ್ತಿರುವ  ಕಾಂಗ್ರೆಸ್ ಗ್ಯಾರೆಂಟಿ ಎನ್ನುವ ಘೋಷಣೆಯೊಂದಿಗೆ ನಮ್ಮ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು  ಜಾರಿಗೆ ತರಲಾಗುವುದು . ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಹಸಿವು ಮುಕ್ತ ಕರ್ನಾಟಕ ಮಾಡಲು ಬಿಪಿಎಲ್ ಕಾರ್ಡುದಾರರಿಗೆ ಏಳು ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಅದೇ ರೀತಿ ಈ ಬಾರಿಯೂ ಸಹ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೆ ಕಾಂಗ್ರೆಸ್ ಭರವಸೆಯ  ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ  ಹಾಗೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ಎರಡು ಸಾವಿರ ರೂಪಾಯಿ ಹಣ ಗ್ಯಾರಂಟಿ ಯೋಜನೆ ನೀಡಿರುವ ಕಾಂಗ್ರೆಸ್  ಅದಕ್ಕೆ ಇನ್ನೊಂದು ಯೋಜನೆಯನ್ನು ಸೇರಿಸಿದೆ.  ಅದೇ “ಅನ್ನ ಭಾಗ್ಯ” ಯೋಜನೆ ಸೇರಿಸಿದೆ . ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ  ನೀಡಲಾಗುವುದು ಎಂದು ಕೆಪಿಸಿಸಿ ಕಛೇರಿಯಲ್ಲಿ ಇಂದು ನಡೆದ (ಫೆಬ್ರವರಿ 25) ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಮಾಧ್ಯಮದ ಮುಖಾಂತರ ಘೋಷಿಸಿದರು.

ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!

ವೈದ್ಯ ಲೋಕವನ್ನೆ ಅಚ್ಚರಿ ಮಾಡಿಸಿದ ಚಿಕಿತ್ಸೆ..!

ಇಂದು ಕರಾಳ ದಿನ; ನಿಜಕ್ಕೂ ಪುಲ್ವಾಮ ಅಟ್ಯಾಕ್ ಹೇಗಿತ್ತು ಗೊತ್ತಾ…?

About The Author