ಕಾಂಗ್ರೆಸ್ ಎಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಶಿಗ್ಗಾವಿಯಲ್ಲಿ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ: ಪ್ರಸಾದ್ ಅಬ್ಬಯ್ಯ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಎಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದಿದ್ದಾರೆ.

ಶಿಗ್ಗಾವಿ ಕ್ಷೇತ್ರದಲ್ಲಿ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ. ಶಿಗ್ಗಾವಿ ಕ್ಷೇತ್ರದಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅಖಾಡಕ್ಕಿಸಲು ತೀರ್ಮಾನವಾಗಿದೆ. ಈ ಹಿನ್ನಲೆಯಲ್ಲಿ ಕೆಲವರಿಗೆ ಒಂದಷ್ಟು ಅಸಮಾಧಾನವಿದೆ. ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಸೀನಿಯರ್ ಲೀಡರ್. ಅವರ ಜೊತೆ ಪಕ್ಷದ ನಾಯಕರು ಮಾತಾಡ್ತಾರೆ. ಬಂಡಾಯ ಶಮನ ಮಾಡ್ತಾರೆ. ಅವರಿಗೆ ಮುಂದೆ ಭವಿಷ್ಯ ಇದೆ, ಹೀಗಾಗಿ ನಾಯಕರು ಶಮನ ಮಾಡ್ತಾರೆ ಎಂದಿದ್ದಾರೆ.

ಅಲ್ಲದೇ, ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಕಗ್ಗಂಟ ಇರಲಿಲ್ಲ. ಇಬ್ಬರೇ ಆಕಾಂಕ್ಷಿಗಳಿದ್ರು, ಕೊನೆ ಘಳಿಗೆಯಲ್ಲಿ ಯಾಸೀರ್ ಖಾನ್ ಗೆ ಟಿಕೆಟ್ ಸಿಕ್ಕಿದೆ. ನಮ್ಮ ಪಕ್ಷದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಯಾಸೀರ್ ಖಾನ್ ಹೆಸರು ಕ್ಷೇತ್ರದಲ್ಲಿ ಚೆನ್ನಾಗಿದೆ. ಅವರೇ ಗೆಲ್ತಾರೆ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

About The Author