ಕಾಂಗ್ರೆಸ್ ಮುಖಂಡ ಸಿದ್ದೇಗೌಡ ಅವರಿಗೆ ವಿಡಿಯೋ, ಸ್ಕ್ರೀನ್ ಶಾಟ್ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸ್ಥಳೀಯ ರಾಜಕಾರಣಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯು ಧನಂಜಯ್ ಎಂದು ಗುರುತಿಸಲ್ಪಟ್ಟಿದೆ. ಸಿದ್ದೇಗೌಡ ಅವರ ಪತ್ನಿ ಯಶೋಧ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಯಶೋಧ ಅವರ ಮನೆಯವರೆಗೂ ಆಗಾಗ್ಗೆ ಭೇಟಿ ನೀಡುತ್ತಿದ್ದ ಧನಂಜಯ್, ನಿನ್ನ ಗಂಡ ಬಿಬಿಎಂಪಿ ಚುನಾವಣೆಗೆ ನಿಂತರೆ, ಸ್ಕ್ರೀನ್‌ಶಾಟ್‌ಗಳನ್ನು ರಿಲೀಸ್ ಮಾಡುತ್ತೇನೆ, ನಿನ್ನ ಮಕ್ಕಳ ವಿಡಿಯೋ ನನ್ನ ಬಳಿ ಇದೆ. ಮಹಿಳೆಯರಿಗೆ ಮಾಡಿದ್ದ ಮೆಸೇಜ್‌ಗಳನ್ನೂ ರಿಲೀಸ್ ಮಾಡುತ್ತೇನೆ ಎಂದು ಧಮ್ಕಿ ನೀಡಿದ್ದನು. ಈ ಸಂದೇಶಗಳನ್ನು ಕಳುಹಿಸಿ ಬಳಿಕ ಡಿಲೀಟ್ ಮಾಡುತ್ತಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಸಿದ್ದೇಗೌಡ ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತನ್ನ ತಂಟೆಗೆ ಬಾರದಂತೆ ಅವಾಜ್ ಹಾಕಿದ್ದ. ಇಲ್ಲವಾದರೆ ನಿನ್ನ ಮಕ್ಕಳನ್ನೂ ಜೀವಂತ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ. ಈ ಹಿನ್ನೆಲೆ ಯಶೋಧ ಅವರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ನೇಹದ ಹೆಸರಲ್ಲಿ ಯುವಕ ಮಾಡಿದ ಬ್ಲ್ಯಾಕ್ಮೇಲ್ನಿಂದ ನರ್ಸಿಂಗ್ ಓದುತ್ತಿದ್ದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಇತ್ತೀಚೆಗೆ ನೆಲಮಂಗಲದಲ್ಲಿ ನಡೆದಿತ್ತು. ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿಗೆ ತಂದೆ ನವೀನ್ ಎಂಬಾತನಿಗೆ ಮಗಳ ನಂಬರ್ ನೀಡಿ ಹಣ ಹಾಕಿಸಿದ್ದರು
ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಹಾಕ್ತಿದ್ದ ಈ ನವೀನ್ ನಿಧಾನಕ್ಕೆ ಅದೇ ನಂಬರ್ ಮೂಲಕ ಆಕೆ ಜತೆ ಸ್ನೇಹ ಬೆಳಸಿದ್ದ. ಬಳಿಕ ನರ್ಸಿಂಗ್ ಮುಗಿಸಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲೇ ಕೆಲಸ ಮಾಡ್ತಿದ್ದಾಗ ಭಾವನಾಳನ್ನ, ನವೀನ್ ಧರ್ಮಸ್ಥಳಕ್ಕೆ ಕರೆದೊಯ್ದು ಅಸಭ್ಯವಾಗಿ ನಡೆದುಕೊಂಡಿದ್ನಂತೆ. ಅಲ್ದೇ ನನ್ನನ್ನೇ ಮದುವೆ ಆಗುಬೇಕೆಂದು ಕಿರುಕುಳ ನೀಡ್ತಿದ್ನಂತೆ ಇದ್ರಿಂದ ಬೇಸತ್ತ ಭಾವನಾ ನೇಣಿಗೆ ಶರಣಾಗಿದ್ದಳು.
ವರದಿ : ಲಾವಣ್ಯ ಅನಿಗೋಳ




