ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತಗಳ್ಳತನದ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕದಲ್ಲೂ ವೋಟ್ ಚೋರಿ ವಿಚಾರದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ರಾಜ್ಯದ ಕಾಂಗ್ರೆಸ್ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ.
ನಿನ್ನೆಯೂ ಮೀಟಿಂಗ್ ಆಗಿದೆ. ನವೆಂಬರ್ 9ಕ್ಕೆ ಹೈಕಮಾಂಡ್‌ಗೆ ಕೊಡ್ತೀವಿ. ಇಂದು ಸಂಜೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮೀಟಿಂಗ್ ಇದೆ. ಯಾರ್ಯಾರು ವೋಟ್ ಚೋರಿ ವಿಚಾರದಲ್ಲಿ ಕೆಲಸ ಮಾಡಿಲ್ವೋ, ಅವರೆನ್ನೆಲ್ಲಾ ಪಕ್ಷದಿಂದ ತೆಗೆದು ಹಾಕ್ತೇವೆ. ಜನರಲ್ ಸೆಕ್ರೇಟರಿ ಆದೇಶಿಸಿದ್ದಾರೆ. ಈ ಬಗ್ಗೆ cm, mlaಗಳ ಜೊತೆ ಮಾತನಾಡುತ್ತೇವೆ.
ನವೆಂಬರ್ 10ಕ್ಕೆ ಸಬ್‌ಮಿಟ್ ಮಾಡಬೇಕು ಅನ್ನೋ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಂಡಿದೆ. ನಮ್ಮಲ್ಲಿ 70ರಿಂದ 80 ಲಕ್ಷ ಆಗಿದೆ. ಕೆಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗಿಯಾಗಿಲ್ಲ. ಅಂಥವರ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿದ್ದೇವೆ. ನನಗೆ ಪವರ್ ಇದೆ. ಕೆಲಸ ಮಾಡದವರನ್ನು ಕಿತ್ತು ಹಾಕ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು, RSS ಪಥಸಂಚಲನ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಈ ಬಗ್ಗೆಯೂ ಡಿ.ಕೆ. ಶಿವಕುಮಾರ್ ಮಾತನಾಡಿದ್ರು. ನಾವು ಆರ್‌ಎಸ್‌ಎಸ್ ನಿಯಂತ್ರಣ ಎಂದು ಎಲ್ಲಿಯೂ ಹೇಳಿಲ್ಲ. ಪರ್ಮಿಷನ್ ತೆಗೆದುಕೊಳ್ಳಬೇಕೆಂದಷ್ಟೇ ಹೇಳಿದ್ದೇವೆ. ಹೀಗಾಗಿ ಸರ್ಕಾರಕ್ಕೆ ಹಿನ್ನಡೆ ಎಂಬುದೇನು ಇಲ್ಲ. ನಮ್ಮ ಲೀಗಲ್ ಟೀಮ್ ಮಾತನಾಡುತ್ತದೆ ಎಂದಿದ್ದಾರೆ.

