www.karnatakatv.net :ಬೆಂಗಳೂರು :ಪೆಟ್ರೋಲ್ –ಡೀಸೆಲೆ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಿಡಿದೆದ್ದಿರೋ ಕಾಂಗ್ರೆಸ್ ಬಿಜೆಪಿ ವಿರುದ್ಧ ಸಮರ ಸಾರಿದೆ. ಈ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಟಾಂಗಾ ಏರಿ ವಿಧಾನಸೌಧಕ್ಕೆ ಜಾಥಾ ನಡೆಸೋ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸಭಾ ಅಧಿವೇಶನದ ಕೊನೆಯ ದಿನದ ಕಲಾಪದ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ಸೇರಿದಂತೆ ಕಾರ್ಯಕರ್ತರು ಇಂದು ವಿಧಾನಸೌಧಕ್ಕೆ ಟಾಂಗಾ ಮೂಲಕ ಜಾಥಾ ನಡೆಸೋ ಮೂಲಕ ಪ್ರತಿಭಟನೆ ಕೈಗೊಂಡಿದ್ದಾರೆ.
ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರೋ ಬಿಜೆಪಿ ಸರ್ಕಾರ ರಾಜ್ಯದ ಜನರ ರಕ್ತ ಹೀರುತ್ತಿದೆ.ಇದರಿಂದಾಗಿ ಬಡವರು ಮತ್ತು ಸಾಮಾನ್ಯ ವರ್ಗಗಳ ಜನರು ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಇದರಿಂದ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗುತ್ತಿವೆ ಅಂತ ಕಾಂಗ್ರೆಸ್ ಆರೋಪ ಮಾಡಿದೆ.
ಕೂಡಲೇ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನಸಾಮಾನ್ಯರು ನೆಮ್ಮದಿಯುತ ಜೀವನ ನಡೆಸಲು ಅನುವುಮಾಡಿಕೊಡಬೇಕು ಅಂತ ಕಾಂಗ್ರೆಸ್ ಆಗ್ರಹಿಸಿದೆ.
ಕರ್ನಾಟಕ ಟಿವಿ -ಬೆಂಗಳೂರು




