Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಹೈಕಮಾಂಡ್ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ.
ಹೀಗಾಗಿಯೇ ಸಿಎಂ ಸಿದ್ಧರಾಮಯ್ಯ ಅವರನ್ನು ಸಮರ್ಥಿಸಿಕೊಳ್ತಿದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಮತ್ತು ದುರಾಡಳಿತ. ಯಾವುದೇ ಪ್ಲಾನ್ ಇಲ್ಲದೆ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ. ಹತ್ಯೆ ಮತ್ತು ಆತ್ಮಹತ್ಯೆ ರಾಜ್ಯ ಸರ್ಕಾರದ ಕೊಡುಗೆ. ಬರ ಬಂದಾಗಲೂ ಸರಿಯಾಗಿನಿರ್ವಹಣೆ ಮಾಡಲಿಲ್ಲ. ನೆರೆ ಬಂದಾಗಲೂ ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ.
ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ಕೊಡ್ತಿಲ್ಲ. ರಸ್ತೆಗಳು ಹದಗೆಟ್ಟಿರೋದ್ರಿಂದ ಕಾಂಗ್ರೆಸ್ ಶಾಸಕರು ಜನರಿಗೆ ಮುಖ ತೋರಿಸಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ವಾಲ್ಮೀಕಿ, ಮುಡಾ ಬಹುದೊಡ್ಡ ಹಗರಣ. ಭಂಡತನದಿಂದ ಸಮರ್ಥನೆ ಮಾಡಿಕೊಳ್ತಿದಾರೆ. ತಮಗೆ ಬೇಕಾದವರಿಗೆ ಸಿದ್ಧರಾಮಯ್ಯ ಸಾವಿರಾರು ಸೈಟ್ ಕೊಡಿಸಿದ್ದಾರೆ. ಇದರ ನೈತಿಕ ಹೊಣೆ ಹೊರುವ ಬದಲಿಗೆ ಜನಾಂದೋಲನ ಮಾಡ್ತಿದಾರೆ. ಸರ್ಕಾರದಲ್ಲಿದ್ದುಕೊಂಡು ಹೋರಾಟ ಮಾಡುವುದರ ಅರ್ಥವೇನು..?
ಹೋರಾಟ ಮಾಡುವುದೇನಿದ್ದರೂ ವಿರೋಧ ಪಕ್ಷದ್ದು. ಭ್ರಷ್ಟಾಚಾರದಲ್ಲಿ ಹೈಕಮಾಂಡ್ ನ ಪಾತ್ರವೂ ಇದೆ.
ಸುರ್ಜೆವಾಲಾ ಮತ್ತು ವೇಣುಗೋಪಾಲ ಸಹ ಪಾಲುದಾರರು. ಹಾಗಾಗಿಯೇ ಸಿಎಂ ರನ್ನು ಸಮರ್ಥಿಸಿಕೊಳ್ತಿದಾರೆ.
ಬಂಗಾರಪ್ಪ ಮತ್ತು ಅರಸು ಹೆಸರು ಹೇಳಿ ಸಿದ್ಧರಾಮಯ್ಯ ಬಚಾವಾಗಲು ನೋಡ್ತಿದಾರೆ. ಇವರಿಬ್ಬರನ್ನೂ ಅಧಿಕಾರದಿಂದ ಇಳಿಸಿದವರು ಕಾಂಗ್ರೆಸ್. ಒಬಿಸಿ ಅವರಿಗೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ನಿಮ್ಮ ಸ್ಥಾನ ಹೋಗುತ್ತೆ ಅಂತ ಅದಕ್ಕೆ ಸಿದ್ಧರಾಮಯ್ಯ ಜಾತಿ ಲೇಪನ ಮಾಡ್ತಿದಾರೆ. ಕೂಡಲೇ ಸಿದ್ಧರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.