“ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ “:ಅಬ್ದುಲ್ ಸಮದ್

Hassan News:

ಅರಸೀಕೆರೆ : ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಹೇಳಿದರು‌

ಬಾಣವಾರದ ದರ್ಗದ ಅವರಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ  ಮಾತನಾಡಿ,  ಸ್ವತಂತ್ರ ಪೂರ್ವದಲ್ಲಿ ಮೊಘಲರಿಂದ ಟಿಪ್ಪುಸುಲ್ತಾನರವರೆಗೆ  ಸ್ವಾತಂತ್ರ್ಯದ ನಂತರವೂ ದೇಶದಲ್ಲಿ ಹಲವಾರು ಮುಸ್ಲಿಮರು ತಮ್ಮ ಅಧಿಕಾರ ಅವಧಿಯಲ್ಲಿ  ಪ್ರಾಮಾಣಿಕ ದಕ್ಷ ಹಾಗೂ ಜನಪದ ಆಡಳಿತವನ್ನು ನೀಡಿದ್ದಾರೆ,  ಅ ಕಾರಣಕ್ಕಾಗಿ ಮುಸ್ಲಿಮರಿಗೆ ಅಧಿಕಾರವನ್ನು ನೀಡಿದರೆ ಈ ದೇಶವನ್ನು ಜಗತ್ತು ನೊಡುವಂತೆ ಮಾಡುತ್ತಾರೆ ಎಂಬ ಹೆದರಿಕೆಗೆ ಮುಸ್ಲಿಮರನ್ನು ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂದರು.  ಮುಸ್ಲಿಮರಿಗೆ ಅಧಿಕಾರದ ನೀಡಿದರೆ ದೇಶವನ್ನು ನಾಶ ಮಾಡುತ್ತಾರೆ ಎಂಬ ಸುಳ್ಳಿನ ಭಯವನ್ನು ಸೃಷ್ಟಿಸಿ ನಮಗೆ ಅಧಿಕಾರ ಸಿಗದ ಹಾಗೆ ಷಂಡ್ಯಂತ್ರ್ಯದಲ್ಲಿ  ಯಶಸ್ಸನ್ನು ಕಂಡಿದ್ದಾರೆ ಇದನ್ನು ಅರಿಯದ ಮುಸ್ಲಿಮರು ಎಲ್ಲಾ ಪಕ್ಷದಲ್ಲೂ ಹರಿದು ಹಂಚಿ ಹೋಗಿದ್ದಾನೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಜನ ಸಾಮಾನ್ಯ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದರು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಉನ್ನತ ಹುದ್ದೆ ದೊರಕುವ ಸಾದ್ಯತೆ ಹೆಚ್ಚಾಗಿದೆ ಎಂದರು.http://ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬಲಿಯಾದ್ರಾ ಬಡ ಮಕ್ಕಳು…?!

ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ  ಮಾತನಾಡಿ ಹಾಸನ ಜಿಲ್ಲೆಯಲ್ಲಿ ಮುಸ್ಲಿಂ ಜನಾಂಗಕ್ಕೆ ಈ ವರೆಗೂ ಪಕ್ಷದಲ್ಲಿ ಉನ್ನತ ಹುದ್ದೆ ಅಧಿಕಾರ ಪಡೆಯುವಲ್ಲಿ ವಂಚಿತರಾಗಿದ್ದಾರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರುಗಳು ಅಧಿಕಾರವನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ ಹಾಸನ ಜಿಲ್ಲೆಯಲ್ಲಿ  ಸುಮಾರು ಎರಡು ಲಕ್ಷದಷ್ಟು ಮುಸ್ಲಿಮರಿದ್ದರು ನಮ್ಮ ಒಳಗಿನ ನ್ಯೂನತೆಗಳಿಂದ

ಉನ್ನತ ಸ್ಥಾನ, ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದರು.  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ರಾತ್ರಿ ಹಗಲಿನ ಅಷ್ಟೇ ಸತ್ಯ. ಸ್ವಾತಂತ್ರ್ಯ ನಂತರದ ಎಲ್ಲಾ ಚುನಾವಣೆಯಲ್ಲಿ ಮುಸ್ಲಿಮರು  ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ  ಮುಸ್ಲಿಮರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಲು ಹಾಗೂ ವಿಧಾನಪರಿಷತ್ ನಿಗಮ-ಮಂಡಳಿಗಳಲ್ಲಿ ಜಿಲ್ಲೆಯ ಕಟ್ಟಕಡೆಗೆ ಮುಸ್ಲಿಮ್ ವ್ಯಕ್ತಿಗೆ ಅಧಿಕಾರ ಸಿಗುವುದಾದರೆ ಜಿಲ್ಲೆಯ ಪ್ರತಿಯೊಬ್ಬ ಮುಸ್ಲಿಮನು ಆ ವ್ಯಕ್ತಿಯ ಪರವಾಗಿ ಕೆಲಸ ಮಾಡುವಂತಾಗಬೇಕು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಮುಖಂಡರುಗಳ ಸಭೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಕೆಪಿಸಿಸಿ ಸದಸ್ಯ ಅರೀಫ್, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಯ್ಯದ್ ಗೌಸ್, ತಸ್ಲೀಮ್, ಸಮಿ ಉಲ್ಲಾ, ಶಿವಣ್ಣ ಪಟೇಲ್, ಖಾಸೀಮ್, ಅಶ್ಶು ಇನ್ನಿತರರು ಇದ್ದರು.

“ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!

 

ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!

ಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ ..!

About The Author