www.karnatakatv.net : ಗುಂಡ್ಲುಪೇಟೆ : ಉತ್ತರಪ್ರದೇಶದಲ್ಲಿ ಕೇಂದ್ರ ಸರ್ಕಾರದ ಸಚಿವರ ಪುತ್ರ ರೈತರನ್ನು ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಗುoಡ್ಲುಪೇಟೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಕಾಡಾ ಅಧ್ಯಕ್ಷರಾದ ಎಚ್. ಎಸ್ ನಂಜಪ್ಪ ಹಾಗೂ ಜಿಡಿಎಲ್ ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಛೇರಿಯಿಂದ ಹೊರಟು ಪ್ರತಿಭಟನಾಕಾರರು ತಾಲೂಕು ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾಡ ಅಧ್ಯಕ್ಷರಾದ ನಂಜಪ್ಪನವರು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಏಕಾಏಕಿ ಕೇಂದ್ರ ಸರ್ಕಾರದ ಒಬ್ಬ ಜವಾಬ್ದಾರಿಯುತವಾದ ಮಂತ್ರಿಯ ಮಗ ರೈತರನ್ನು ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ, ಎಂದರೆ ದೇಶದಲ್ಲಿ ಕಾನೂನು ಯಾವ ರೀತಿ ಇದೆ ಎಂಬುದನ್ನು ನಾವು ನೀವು ಅರಿತುಕೊಳ್ಳಬೇಕಾಗಿದೆ ಮತ್ತು ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿದ ಕೇಂದ್ರ ಸರ್ಕಾರದವರು ರೈತರ ಪರ ನಮ್ಮ ಸರ್ಕಾರವಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಆದರೆ ರೈತರನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಎಂದರು ಆ ಕೇಂದ್ರ ಸರ್ಕಾರದವರಿಗೆ ನಾಚಿಕೆಯಾಗಬೇಕು ಎಂದು ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪುರಸಭಾ ಅಧ್ಯಕ್ಷರಾದ ಎ ಲ್. ಸುರೇಶ್ ಮಾತನಾಡಿ, ಇದು ಬಿಜೆಪಿ ಸರ್ಕಾರದ ಒಂದು ವೈಫಲ್ಯ ಮತ್ತು ರೈತರಿಗೆ ಇನ್ಯಾವ ಅನುಕೂಲವನ್ನು ಮಾಡುತ್ತಾರೆ ಪ್ರತಿಭಟನೆ ವೇಳೆಯಲ್ಲಿ ಅದು ಒಬ್ಬ ಕೇಂದ್ರಸರ್ಕಾರದ ಮಂತ್ರಿಯ ಮಗ ಈ ರೀತಿ ರೈತರನ್ನು ಕಾರು ಹತ್ತಿಸಿ ಕೊಲೆ ಮಾಡುತ್ತಾರೆ ಎಂದರೆ ದೇಶದಲ್ಲಿ ಯಾವ ರೀತಿ ಕಾನೂನು ಇದೆ ಎಂಬುದು ಗೊತ್ತಾಗುತ್ತದೆ ಎಂದು ಗುಡುಗಿದರು. ಈ ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತು ರೈತರಿಗೆ ಯಾವುದೇ ತರಹದ ಸೌಲಭ್ಯಗಳನ್ನು ನೀಡಿಲ್ಲ ಮತ್ತು ಸಾಮಾನ್ಯವಾಗಿರುವ ವ್ಯಕ್ತಿಯೂ ಕೂಡ ಈ ದಿನಗಳಲ್ಲಿ ಬದುಕಲು ಬಹಳ ಕಷ್ಟಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಎಚ್ .ಎಸ್ . ನಂಜಪ್ಪ, ಮಾಜಿ ಪುರಸಭಾ ಅಧ್ಯಕ್ಷರಾದ ಎಲ್. ಸುರೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ .ಬಿ. ರಾಜಶೇಖರ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಕೆಎಸ್ ಮಹೇಶ್, ಬಸಪ್ಪ ಬುಲೆಟ್, ತಾಲೂಕಿನ ಕಾಂಗ್ರೆಸ್ ಮುಖಂಡರು ಯುವಕರು ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರಸಾದ್, ಕರ್ನಾಟಕ ಟಿವಿ – ಚಾಮರಾಜನಗರ