ಮೈಸೂರು: ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದು, ಕಾಂಗ್ರೆಸ್ ನವರು ಹಿಂದೂ ವಿರೋಧಿ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಹಿಂದೂ ರಾಷ್ಟ್ರ ಪ್ರತಿಪಾದಿಸಿದ ಅಂಬೇಡ್ಕರ್ ರನ್ನು ದ್ವೇಷಿಸಿದ್ದರು, ಹಿಂದೂ ರಾಷ್ಟ್ರದ ಬಗ್ಗೆ ವಿ.ಡಿ ಸಾವರ್ಕರ್ ಮಾತನಾಡಿದ್ದರು ಸಾವರ್ಕರ್ ವಿರುದ್ಧವೂ ಕಾಂಗ್ರೆಸ್ ನಾಯಕರು ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಮಾತನಾಡಿದರು.
ಸತೀಶ್ ಜಾರಕಿಹೊಳಿ ಅವರದ್ದು ನಿಜವಾದ ರಾಜಕೀಯ ಡಿಎನ್ಎ ಕಾಂಗ್ರೆಸ್ ಮನಸಿನ ಮಾತನ್ನು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ತಾಲಿಬಾನ್ ಸರ್ಕಾರ ಬಂದಂತೆ ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸಿಗರು ನೇರವಾಗಿ ಹೇಳಲಿ ಹಿಂದುಗಳ ಮತ ಬೇಡವೆಂದು ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ
ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ : ತಮಿಳುನಾಡಿನಲ್ಲಿ ಹುಡುಕಾಟ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ