Banglore news:
ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಿಜಪಿ ಜನಸ್ಪಂದನ ಕಾರ್ಯಕ್ರಮ ಬೃಹತ್ ಆಗಿಯೇ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್ ಕಾಂಗ್ರೆಸ್ ಗೆ ಹಾಡಿನ ಮೂಲಕ ಟಾಂಗ್ ನೀಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಡಾ. ಸುಧಾಕರ್, ‘’ಕಾಂಗ್ರೆಸ್ ಕಚ್ಚಾಟವನ್ನು ನೋಡಿದ್ರೆ ನನಗೆ ಡಾ. ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ ಚಿತ್ರದ ಹಾಡು ನೆನಪಿಗೆ ಬಂತು. ಅದರಲ್ಲಿ ಅವರು ಹೇಳ್ತಾರೆ ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ. ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು. ಆಸೆ ಎಂಬ ಬಿಸಿಲ ಕುದುರೆ ಏಕೆ ಏರುವೆ..? ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ.. ಜನರ ನಿಯಮ ಮೀರಿ ಇಲ್ಲಿ ಏನೂ ನಡೆಯದು’’ ಎಂದು ಡಾ. ರಾಜ್‌ಕುಮಾರ್ ಅವರ ಹಾಡನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಹಾಡಿದರು. ನಂತರ,’’ ಮಾನ್ಯ ಸಿದ್ದರಾಮಣ್ಣ, ಮಾನ್ಯ ಡಿಕೆಶಿಯವರೇ, ನೀವು ನೆನೆಸಿದಂತೆ ರ‍್ನಾಟದಲ್ಲಿ ಏನೂ ಆಗದು’’ ಎಂದೂ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಜನ ಸ್ಪಂದನ ಸಮಾವೇಶದಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವಿನ ಆಂತರಿಕ ಕಚ್ಚಾಟದ ಬಗ್ಗೆ ಸಚಿವ ಸುಧಾಕರ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.