Wednesday, April 16, 2025

Latest Posts

ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!

- Advertisement -

State News:

Feb:27:ರಾಜ್ಯದಲ್ಲಿ ಶಿವಮೊಗ್ಗ ಮತ್ತು ಕುಂದಾನಗರಿ ಬೆಳಗಾವಿಯಲ್ಲಿ ಮೋದಿ ಮೇನಿಯಾ ಅಬ್ಬರಿಸಿತ್ತು.ಆದರೆ ಇವೆಲ್ಲದಕ್ಕೂ ಇದೀಗ  ಕಾಂಗ್ರೆಸ್ಸಿಗರು  ತಮ್ಮದೇ ಆದ ಶೈಲಿಯಲ್ಲಿ ಉತ್ತರವ ನ್ನು ನೀಡಿದಂತಿದೆ. ನಿಜ ಕಾಂಗ್ರೆಸ್ಸಿಗರು ಮೋದಿ ಪ್ರತಿ ಮಾತಿಗೆ ಟಾಂಗ್ ಕೊಟ್ಟಂತೆ ಸರಣಿ  ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. “ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖವಾದುದು. ಕರ್ನಾಟಕದಿಂದ ಕಿತ್ತು, ಉತ್ತರದ ರಾಜ್ಯಗಳಿಗೆ ಹಂಚುತ್ತಾ, ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲು ನೀಡದೆ ಅನ್ಯಾಯವೆಸಗಿದ ನರೇಂದ್ರ ಮೋದಿ ಅವರೇ, ನೀವು ಎಸಗಿದ ದ್ರೋಹಕ್ಕೆ ಅನಂತಾನಂತ ಧನ್ಯವಾದಗಳು!” ,

“ಕರ್ನಾಟಕದ ಕೈಗಾರಿಕಾ ಕ್ರಾಂತಿಯ ಮುಕುಟಮಣಿಯಂತಿದ್ದ ಭದ್ರಾವತಿಯ VISL ಕಾರ್ಖಾನೆಯನ್ನು ಮುಚ್ಚಿ ಸಾವಿರಾರು ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟ ನರೇಂದ್ರ ಮೋದಿ ಅವರೇ, ನಿಮಗೆ ಸಾಷ್ಟಾಂಗ ನಮಸ್ಕಾರಗಳು! “ಮೋದಿ ಹೈ ತೋ ಮುಮ್ಕಿನ್ ಹೈ” ಎಂದರೆ ಮೋದಿಯಿಂದ ಎಲ್ಲವನ್ನೂ ಮುಳುಗಿಸಲು ಸಾಧ್ಯ ಎಂಬದೇ ಅಸಲಿ ಅರ್ಥ!”

“ಬೆಂಗಳೂರು ಗಾರ್ಡನ್ ಸಿಟಿ, ಐಟಿ ಸಿಟಿ ಎಂಬ ಖ್ಯಾತಿ ಗಳಿಸಿತ್ತು. ಆದರೆ ಈಗ ರಸ್ತೆಗುಂಡಿಗಳಿಗೆ ದಿನಕ್ಕೊಂದು ಜೀವ ಬಲಿಯಾಗುತ್ತಿವೆ, ಇಂದು ಹಾಕಿದ ಡಾಂಬಾರು ನಾಳೆ ಕೀಳುತ್ತದೆ. ವಿಲೇವಾರಿಯಾಗದ ಕಸದಿಂದ ಬೆಂಗಳೂರು ಗೊಬ್ಬರದ ಗುಂಡಿಯಾಗಿದೆ. ಬೆಂಗಳೂರಿಗೆ ಇಂತಹ ಅಪಖ್ಯಾತಿ ಅಂಟಿಸಿದ ಕೀರ್ತಿ ಮೋದಿಯವರಿಗೆ ಸಲ್ಲಬೇಕು..!”

“ಕರ್ನಾಟಕವು ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಜನರ ಬದುಕು ಮುಳುಗಿದಾಗ, ಅಪಾರ ಆಸ್ತಿಪಾಸ್ತಿ ಹಾನಿಯಾದಾಗ ಕರ್ನಾಟಕದತ್ತ ತಿರುಗಿಯೂ ನೋಡದ ನರೇಂದ್ರ ಮೋದಿ ಅವರೇ, ತಾವು ಕರ್ನಾಟಕಕ್ಕೆ ನಯಾಪೈಸೆ ನೆರವು ನೀಡದೆ ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದೀರಿ. ತಮ್ಮ ಈ ದ್ರೋಹಕ್ಕೆ ಧನ್ಯವಾದಗಳು!”

“ಉಡುವ ಬಟ್ಟೆಯಿಂದ ತಿನ್ನುವ ಅನ್ನದವರೆಗೂ GST ತೆರಿಗೆ ಹಾಕಿ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದ ನರೇಂದ್ರ ಮೋದಿ ಅವರಿಗೆ ಅನಂತಾನಂತ ಧನ್ಯವಾದಗಳು! ಇಂತಹ ಕಠೋರ, ಅಮಾನವೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿಯಿಂದ ಮಾತ್ರ ಸಾಧ್ಯ. ದರೋಡೆಗೆ GST ಎಂದು ಹೆಸರಿಟ್ಟು ಕಾನೂನುಬದ್ಧಗೊಳಿಸಿದ್ದಕ್ಕೆ Thank you..!”

“ಪಿಎಸ್‌ಐನಿಂದ ಹಿಡಿದು ಪೌರ ಕಾರ್ಮಿಕರ ನೇಮಕಾತಿಯವರೆಗೂ ಪ್ರತಿ ಹುದ್ದೆಗಳನ್ನೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡುತ್ತಿರುವ bjp ಸರ್ಕಾರದ ಸಾಧನೆ ಅಮೋಘವಾದುದು! ಅರ್ಹತೆಯ ಆಧಾರದಲ್ಲಿ ಸಿಗುತ್ತಿದ್ದ ಉದ್ಯೋಗಗಳನ್ನ ಸುಲಭವಾಗಿ ಹಣ ಕೊಟ್ಟು ಕೊಳ್ಳುವಂತ ವ್ಯವಸ್ಥೆ ನಿರ್ಮಾಣವಾಗಿದ್ದರಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ!  Thank you..!”

“ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ 40% ಸರಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. “ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ!  Thank you..!” 

ಎಂಬೆಲ್ಲಾ ಪರೋಕ್ಷ ಪ್ರತೀಕಾರದ ರೀತಿ ಟಾಂಗ್ ನೀಡಿ  ನರೇಂದ್ರ ಮೋದಿ ವಿರುದ್ಧ ಥ್ಯಾಂಕ್ಯೂ  ಸಮರವನ್ನೇ ಸಾರಿದೆ ಕಾಂಗ್ರೆಸ್.

ಒಂದು ಕ್ಲಿಕ್ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ…! ಮೋದಿ ಸರಕಾರದ ಮಹತ್ತರ ಯೋಜನೆ

ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಇಲ್ಲ…! ಏನಿದು ಜೆಡಿಎಸ್ ಗುಡುಗು..?!

2,250 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

 

 

 

- Advertisement -

Latest Posts

Don't Miss