2023ರ ರಾಜ್ಯ ವಿಧಾನಸಭಾ ಚುನಾವಣೆಗೆ ‘ಕಾಂಗ್ರೆಸ್’ನಿಂದ ಹೊಸ ಮುಖಗಳು ಮಣೆ.?! ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ, ರಾಜಯಕೀಯ ಪಕ್ಷಗಳಿಂದ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿಯೆ 2023ರ ವಿಧಾನಸಭಾ ಚುನಾವಣೆಗೆ ಹೊಸ ಮುಖಗಳು ಕೂಡ ಎಂಟ್ರಿ ಕೊಡಲಿವೆ ಎನ್ನಲಾಗುತ್ತಿದೆ.

ಈ ನಿಟ್ಟಿನಲ್ಲಿ 2023ರ ಚುನಾವಣೆಗೆ ಕಾಂಗ್ರೆಸ್ ನಿಂದ ಹೊಸ ಮುಖಗಳ ಎಂಟ್ರಿಗೆ ತಯಾರಿ ನಡೆದಿದೆ. ಅಲ್ಲದೇ ಹೊಸ ಹುರುಪಿನೊಂದಿಗೆ ಶಾಸಕರಾಗಲು ತೆರೆಮರೆ ಯತ್ನವನ್ನು ಹೊಸ ನಾಯಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ತಮ್ಮ ತಂದೆ- ತಾಯಿ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಕನಸು ಹೊತ್ತಿರುವ ಯುವ ಮುಖಗಳು, ಮಿಗಿಲಾಗಿ ತಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸಲು ವೇದಿಕೆಯನ್ನು ಕೂಡ ಕೆಲ ನಾಯಕರು ಸಿದ್ದಪಡಿಸುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಟಿಕೆಟ್ ಬಯಸಿರುವ ಹೊಸ ಮುಖಗಳು ಯಾವುವು ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಕಾಂಗ್ರೆಸ್ ನಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಹೊಸ ಮುಖಗಳ ಪಟ್ಟಿ

  • ಎಂ.ಆರ್ ಸೀತಾರಾಂ ಪುತ್ರ ರಕ್ಷಾ ರಾಮಯ್ಯ – ಚಿಕ್ಕಬಳ್ಳಾಪುರ
  • ಮೋಟಮ್ಮ ಪುತ್ರಿ ನಯನ – ಮೂಡಿಗೆರೆ
  • ಆರ್.ವಿ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ – ಯಲ್ಲಾಪುರ
  • ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಜಿಹೊಳಿ – ಯಮಕನಮರಡಿ
  • ಶ್ಯಾಮನೂರು ಶಿವಶಂಕರಪ್ಪ ಸೊಸೆ – ದಾವಣಗೆರೆ ದಕ್ಷಿಣ
  • ಹೆಚ್.ಸಿ ಮಹಾದೇವಪ್ಪ ಪುತ್ರ ಸುನಿಲ್ ಭೋಸ್ – ನಂಜನಗೂಡು
  • ಮಹಾದೇವ್ ಪುತ್ರಿ ಐಶ್ವರ್ಯ – ಕೆ.ಆರ್ ನಗರ
  • ಮಹಾದೇವ ಪ್ರಸಾದ್ ಪುತ್ರ ಗಣೇಶ್ ಪ್ರಸಾದ್ – ಗುಂಡ್ಲುಪೇಟೆ
  • ಎ.ಕೆ ಸುಬ್ಬಯ್ಯ ಪುತ್ರ ಪೊನ್ನಣ್ಣ – ವಿರಾಜಪೇಟೆ
  • ಭೋಸರಾಜ್ ಪುತ್ರ ರವಿ ಭೋಸ್ ರಾಜ್ – ರಾಯಚೂರು ನಗರ
  • ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕನ ಅಳಿಯ ರಜತ್ ಉಳ್ಳಾಗಡಿ – ಹುಬ್ಬಳ್ಳಿ
  • ಮಂಥರ್ ಗೌಡ – ಮಡಿಕೇರಿ
  • ಮಿಥುನ್ ರೈ – ಮೂಡಬಿದರೆ

About The Author