Saturday, July 12, 2025

Latest Posts

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರು ತಲೆ ತಗ್ಗಿಸುವಂತೆ ಮಾಡುತ್ತಿದೆ; ವಿಶ್ವೇಶ್ವರಯ್ಯ ಹೆಗ್ಡೆ ಕಾಗೇರಿ..!

- Advertisement -

ರಾಜಕೀಯ ಸುದ್ದಿ : ಇಸ್ರೇಲ್ ಹಮಾಸರು ಉಗ್ರರ ದಾಳಿಯನ್ನ ಖಂಡಿಸುತ್ತೆನೆ. ಇಸ್ರೇಲ್‌‌ನಲ್ಲಿ  ಸಾಕಷ್ಟು ಜನ ಸಾವನ್ನಪ್ಪಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದು ರಾಜ್ಯದ ಜನರು ತಲೆ ತಗ್ಗಿಸುವಂತ ಕೆಲಸವನ್ನ ಈ ಸರ್ಕಾರ ಮಾಡುತ್ತಿದೆ.

ಈ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ, ಎತ್ತ ಸಾಗುತ್ತಿದೆ. ತಾನೂ ಏನ್ ಮಾಡಬೇಕೆಂಬುದನ್ನ ಮರೆತು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಈ ಸರ್ಕಾರದ ಉಪಮುಖ್ಯಮಂತ್ರಿ ಹಳೆ ಹುಬ್ಬಳ್ಳಿಯ ಪ್ರಕರಣವನ್ನ ಕೈ ಬಿಡುವಂತೆ ಪತ್ರ ಬರೆದಿದ್ದಾರೆ. ಒಂದು ಸಮುದಾಯವನ್ನ ಓಲೈಕೆ ಮಾಡಲು ಈ ರೀತಿಯ ಕೆಲಸ ಮಾಡುತ್ತಿದ್ದಾರೆ.

ಜನರ ನೆಮ್ಮದಿಯನ್ನ ಹಾಳು ಮಾಡುವವರಿಗೆ ಈ ಸರ್ಕಾರ ಬೆನ್ನಿಗೆ ನಿಂತಿದೆ. ಶಾಂತಿ ಕದಡುವ ಕೆಲಸವನ್ನು ಈ ಸರ್ಕಾರ ಮಾಡುವುದು ಆತಂಕಕಾರಿಯಾಗಿದೆ. ಚಲುವರಾಯಸ್ವಾಮಿ ಮೇಲೆ ಗಂಭೀರ ಅರೋಪ ಬಂದಿತ್ತು, ಈ ಸರ್ಕಾರ ಏನ್ ‌ಮಾಡ್ತು. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ. ಸರ್ಕಾರದ ನಿರ್ಲಕ್ಷ್ಯಗಳಿಂದ ಪವರ್ ಕಟ್ ಮಾಡಲಾಗುತ್ತಿದೆ.

ಈ ಸರ್ಕಾರದಲ್ಲಿ ಯಾವುದೇ ಸಚಿವರಿಗೆ ಗಂಭೀರತೆ ಇಲ್ಲ. ಸಿದ್ದರಾಮಯ್ಯ ತಮ್ಮ‌ ಮಂತ್ರಿ ಮಂಡಲವನ್ನ ಸಮರ್ಪಕವಾಗಿ ನಡೆಸಿಕೊಂಡು ಹೋಗಲು ದುರ್ಬಲರಾಗಿದ್ದಾರೆ. ಉದಾಸೀನ ಮಾನಸಿಕತೆಯಲ್ಲಿ ಸಿದ್ದರಾಮಯ್ಯನವರಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರಯ್ಯಾ ಹೆಗ್ಡೆ ಕಾಗೇರಿ ತೀವ್ರ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು

ಎಪಿಎಂಸಿ ಲೈಸೆನ್ಸ್ ದಾರರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ: ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ

ಹಿಂಡಲಗಾ ಜೈಲು, ಪರಪ್ಪನ ಅಗ್ರಹಾರವನ್ನು ಸ್ಪೋಟಿಸುತ್ತೇನೆಂದು ಬೆದರಿಕೆ..

- Advertisement -

Latest Posts

Don't Miss