Wednesday, September 24, 2025

Latest Posts

ಸಿದ್ದರಾಮಯ್ಯನಿಂದಲೇ ಕಾಂಗ್ರೆಸ್‌ ಅಂತ್ಯ DKಗೆ ಏನೂ ಉಳಿದಿರುವುದಿಲ್ಲ!

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ, ಕರ್ನಾಟಕದ ಬಹು ದೊಡ್ಡ ವರ್ಗಗಳ ಜನರನ್ನು ನಮ್ಮ ಪಕ್ಷದತ್ತ ಸೆಳೆಯುವ ಮೂಲಕ ಸಹಾಯ ಮಾಡುತ್ತಿರುವುದಕ್ಕಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತರಾತುರಿಯಲ್ಲಿ ಜಾತಿ ಜನಗಣತಿ ನಡೆಸಲು ಆದೇಶಿಸುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಸದಸ್ಯರು ಹಾಗೂ ಸಂಪುಟದ ಸಹೋದ್ಯೋಗಿಗಳಿಗೂ ಅಸಮಾಧಾನ ಉಂಟು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಅವರು ಮತ್ತಷ್ಟು ಮುಂದುವರಿದು, ಪ್ರಸ್ತುತ ಒಕ್ಕಲಿಗರು, ಲಿಂಗಾಯತರು, ಸಲಿಗರು, ಹಿಂದುಳಿದ ವರ್ಗಗಳು, ಬ್ರಾಹ್ಮಣರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿ ಸಮುದಾಯದವರೂ ಕೂಡ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ತಮ್ಮ ಸ್ವಂತ ಕುರುಬ ಸಮುದಾಯವೇ ಅವರೊಂದಿಗಿದೆಯೇ ಅಥವಾ ಅವರೂ ಸಹ ಅಸಮಾಧಾನಗೊಂಡಿದೆಯೇ ಎಂಬುದನ್ನು ಮುಖ್ಯಮಂತ್ರಿಗಳು ಸ್ವತಃ ಕೇಳಿಕೊಳ್ಳಬೇಕು” ಎಂದು ಹೇಳಿದ್ದಾರೆ.

ವಾಸ್ತವವಾಗಿ ಈ ಜಾತಿ ಸಮೀಕ್ಷೆಯಿಂದ ಯಾರಿಗೆ ಸಂತೋಷವಾಗಿದೆ ಎಂದು ಕೇಳುವಂತಾಗಿದೆ. ಬಹುಶಃ ರಾಹುಲ್ ಗಾಂಧಿಯವರಿಗೆ ಮಾತ್ರ ಇದರಿಂದ ಖುಷಿಯಾಗಿರಬಹುದು. ಕರ್ನಾಟಕದ ಪ್ರತಿಯೊಂದು ಸಮುದಾಯವೂ ಈ ಜಾತಿ ಸಮೀಕ್ಷೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಪ್ರತಿಯೊಂದು ಸಮುದಾಯವೂ ಸಮೀಕ್ಷೆಯ ಅಂತಿಮ ಫಲಿತಾಂಶದ ಬಗ್ಗೆ ಭಯ ವ್ಯಕ್ತಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ಸಮೀಕ್ಷೆಯೂ ಸಮುದಾಯಗಳ ನಿರೀಕ್ಷೆಗಳಿಗೆ ತಕ್ಕಂತೆ ಇರಲಾರದು ಎಂಬುದು ಸ್ಪಷ್ಟವಾಗಿದೆ. ಇಂದಿನ ಪತ್ರಿಕೆಗಳಲ್ಲಿ ಈ ಕುರಿತಾದ ವರದಿಗಳೇ ತುಂಬಿವೆ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಹಾದಿಯಲ್ಲಿ ನಡೆದುಕೊಂಡಿದ್ದಾರೆ. ಅಧಿಕಾರ ಹಸ್ತಾಂತರದ ಸಮಯ ಬಂದಾಗ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿಕೊಳ್ಳಲು ನಿಜವಾಗಿಯೂ ಏನೂ ಉಳಿದಿರುವುದಿಲ್ಲ ಎಂದು ಲಹರ್ ಸಿಂಗ್ ಸಿರೋಯಾ ಲೇವಡಿ ಮಾಡಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss