Wednesday, March 12, 2025

Latest Posts

ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು..!

- Advertisement -

www.karnatakatv.net: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲವು ಸಾಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ತನ್ನ ಸಮೀಪದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ ಅವರಿಗಿಂತ 7598 ಮತಗಳ ಅಂತರದಿoದ ಗೆಲುವು ಸಾಧಿಸಿದ್ದಾರೆ. ಶ್ರೀನಿವಾಸ ಮಾನೆ 87, 113 ಮತಗಳನ್ನು ಪಡೆದರೆ, ಶಿವರಾಜ್ ಸಜ್ಜನರಗೆ 79,515 ಮತಗಳು ಸಿಕ್ಕಿವೆ. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ 921 ಮತಗಳನ್ನು ಗಳಿಸಿದ್ದಾರೆ. ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದ್ದು, ಭಾರೀ ಪ್ರತಿಷ್ಠೆಗೆ ಕಾರಣವಾಗಿತ್ತು. ಮುಖ್ಯಮಂತ್ರಿ, ಸಚಿವರು ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭಾರೀ ಪ್ರಚಾರ ನಡೆಸಿದ್ದರು.

- Advertisement -

Latest Posts

Don't Miss