ಧರ್ಮಸ್ಥಳ ನಿಗೂಢ ಸಾವುಗಳ ಕೇಸ್, ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಮೊದಲ ಬಾರಿಗೆ ಅನಾಮಿಕ, ಮಾಸ್ಕ್ ಮ್ಯಾನ್, ಮಾಧ್ಯಮದ ಎದುರು ಮಾತನಾಡಿದ್ದಾನೆ. ನ್ಯಾಷನಲ್ ಮೀಡಿಯಾ ಇಂಡಿಯಾ ಟುಡೇ ವರದಿಗಾರನ ಜೊತೆ, ತಾನು ನೋಡಿದ್ದೇನು? ಮಾಡಿದ್ದೇನು? ಬಳಿಕ ಏನಾಯ್ತು? ಧರ್ಮಸ್ಥಳ ತೊರೆದಿದ್ದು ಯಾವಾಗ? ಮತ್ತೆ ಬಂದಿದ್ದೇಕೆ? ಅನ್ನೋ ಬಗ್ಗೆ, ಎಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಇಂಡಿಯಾ ಟುಡೇ ವರದಿಗಾರನ ಪ್ರಶ್ನೆ? ಹಾಗೂ ಅನಾಮಿಕ ಕೊಟ್ಟ ಉತ್ತರ ಏನು ಅಂತ ನೋಡೋದಾದ್ರೆ..
ಪ್ರಶ್ನೆ 1. ನೀವು ಮೊದಲು ಬಂದು ಕಂಪ್ಲೇಟ್ ಕೊಟ್ಟಿದ್ದೀರಿ. 1994ರಿಂದ 2014ರವರೆಗೆ ಕೆಲಸ ಮಾಡಿದ್ದೀರಾ? ಕಂಪ್ಲೇಂಟ್‌ನಲ್ಲಿ ಏನೆಂದು ಉಲ್ಲೇಖ ಮಾಡಿದ್ದೀರಾ?
ಉತ್ತರ 1. ನಾನು ಕಂಪ್ಲೇಂಟ್‌ನಲ್ಲಿ ಡೆಡ್ ಬಾಡಿಗಳನ್ನು ತೆಗೆಯಬೇಕೆಂದು ಉಲ್ಲೇಖ ಮಾಡಿದ್ದೇನೆ? ಕೆಲವೊಂದು ಜಾಗ ಎಲ್ಲಾ ಮಿಸ್ ಮ್ಯಾಚ್ ಆಗಿದೆ. ನಾವು ಹೂತಿದ್ದ ಜಾಗಗಳಲ್ಲಿ ರೋಡ್‌ಗಳಾಗಿವೆ. ಆಗ ಹಳೆ ರೋಡ್ ಇತ್ತು. ಗುರುತು ಮಾಡಬಹುದಿತ್ತು. ಈಗ ಜೆಸಿಬಿ ಕೆಲಸ ಆಗಿದೆ. ಹೀಗಾಗಿ ಗುರುತು ಮಾಡಲು ಆಗಲಿಲ್ಲ. ಬಾಹುಬಲಿ ಬೆಟ್ಟದಲ್ಲೂ ಕೇರಳ ಲೇಡಿ ಬಾಡಿ ಹಾಕಿದ್ದೆವು. ಅಲ್ಲಿಯೂ ನೋಡಿದಾಗ ಮಣ್ಣಿನ ಕೆಲಸ ನಡೆದಿದೆ. ಅಲ್ಲಿಗೆ ಹೋಗಿ ಇಡೀ ದಿನ ಹುಡುಕಿದ್ರೂ, ಕಂಡು ಹಿಡಿಯೋಕೆ ಆಗಲಿಲ್ಲ. ಸ್ನಾನ ಘಟ್ಟದಲ್ಲೂ 70ರಷ್ಟು ಡೆಡ್‌ಬಾಡಿಗಳನ್ನು ಹಾಕಿದ್ದೇವೆ. ಅಲ್ಲಿ ಮಣ್ಣು ತುಂಬಿಸಿದ್ದಾರೆ. ಡ್ರೋಣ್ ಕ್ಯಾಮರಾ ತಂದ್ರು ಹಾಕಿದ್ರು. ಮಷಿನ್‌ನಲ್ಲೂ ಕಂಡು ಹಿಡಿಯೋಕೆ ಆಗಲಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಯುವಾಗ, ಅಡಿಯಿಂದ ನೀರು ಬರ್ತಿದೆ. ಮಣ್ಣು ಜಾಸ್ತಿ ಎತ್ತರ ಇರೋದ್ರಿಂದ ಡೆಡ್‌ಬಾಡಿಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಎರಡ್ಮೂರು ದಿನ ತೆಗೆಯೋಕೆ ನೋಡಿದ್ರೂ ಸಿಕ್ತಿಲ್ಲ. ಅಲ್ಲಿಂದ ಬಾಹುಬಲಿ ಬೆಟ್ಟದಲ್ಲಿ ನೋಡ್ಬೇಕು. 1ರಿಂದ 5 ಜಾಗ ಇನ್ನೂ ಬಾಕಿ ಇದೆ.
ಪ್ರಶ್ನೆ 2. 20 ವರ್ಷ ಕೆಲಸ ಮಾಡಿದ್ದೀರಾ? ಹೆಣ ಹೂತಾಕಬೇಕು ಅಂತಾ ಯಾರು ಸಂದೇಶ ಕೊಡ್ತಿದ್ರು? ಅವರು ಹೇಳಿದಂತೆ ಹೆಣ ಹೂತಾಕುವ ಜಾಗಾನಾ? ಅಥವಾ ಅರಣ್ಯ ಪ್ರದೇಶಾನಾ?
ಉತ್ತರ 2. ನಾವು ಹೆಣ ಹೂತು ಹಾಕುವ ಜಾಗ ಅಂತೇನೂ ಇಲ್ಲ. ಎಲ್ಲಿ ಬಾಡಿ ಸಿಗುತ್ತೋ ಅಲ್ಲಲ್ಲೇ ಮಣ್ಣು ಮಾಡ್ತಿದ್ವಿ. ನನ್ನ ಅಣ್ಣ, ಭಾವ,ರಾಜು ಎಂಬಾತ ಸೇರಿ ಮಣ್ಣು ಮಾಡುತ್ತಿದ್ವಿ. ತುಂಬಾ ಕಡೆ ಹೂತು ಹಾಕಿದ್ದೇವೆ.
ಪ್ರಶ್ನೆ 3. ಭಕ್ತರ ಶವಾನಾ? ಸ್ಥಳೀಯ ಜನರ ಶವಾನಾ? ಇಲ್ಲಿ ತುಂಬಾ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ನೀವು ಹುಡುಗಿಯರ ಬಾಡಿ ಸಿಕ್ಕಿತ್ತು ಅಂತಿದ್ದೀರಾ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮಾಡಿ ಸಾಯಿಸಿದ ಬಾಡಿ ಅಂತೀರಾ. ಇದನ್ನು ಹೇಗೆ ಗುರುತು ಹಿಡೀತಿರಾ?
ಉತ್ತರ 3: ಭಕ್ತರು ಅಥವಾ ಸ್ಥಳೀಯರು ಅಂತಾ ಗುರುತು ಹಿಡಿಯೋಕೆ ಆಗಲ್ಲ ಆದರೆ, ಗಾಯಗಳು, ಗುರುತುಗಳನ್ನು ನೋಡುವಾಗ ಗೊತ್ತಾಗುತ್ತೆ. ಹೆಚ್ಚಾಗಿ ಹೆಣ್ಣು ಮಕ್ಕಳ ಹೆಣಗಳೇ ಇದ್ವು. ಮ್ಯಾನೇಜರ್ ಮಾಹಿತಿ ಕಚೇರಿಗೆ ಹೇಳ್ತಾರೆ. ಬಳಿಕ ರೂಮ್ ಬಾಯ್ ನಮಗೆ ಹೇಳ್ತಾರೆ. ಬೇರೆ ದಾರಿಯೇ ಇಲ್ಲ. ಮಣ್ಣು ಮಾಡಬೇಕಿತ್ತು.
ಪ್ರಶ್ನೆ 4: ಅತ್ಯಾಚಾರ ಆಗಿದೆ ಅಂತಾ ಹೇಗೆ ಐಡೆಂಟಿಫೈ ಮಾಡ್ತೀರಾ?
ಉತ್ತರ 4: ನಮ್ಮ ಕೈಯ್ಯಲ್ಲಿ ಆಗಲ್ಲ. ಈ ಬಗ್ಗೆ ಡಾಕ್ಟರ್ ಐಡೆಂಟಿಫೈ ಮಾಡ್ಬೇಕು. ಆದರೆ, ನಮ್ಮ ಕಣ್ಣಿಗೆ ಆಗೇ ಕಾಣುತ್ತದೆ.
ಪ್ರಶ್ನೆ 5: ಚಿಕ್ಕ ಚಿಕ್ಕ ಹುಡುಗೀರಾ? ಹೆಂಗೆ ಇರೋರು?
ಉತ್ತರ 5: ಎಲ್ಲಾ ಮಿಕ್ಸ್. 35 ವರ್ಷ, 16, 15, 13, 40 ವರ್ಷದ ಹೆಣಗಳು ಇದ್ವು. ಎಲ್ಲಾ ವಯಸ್ಸಿನ ಹೆಣ್ಮಕ್ಕಳ ಹೆಣಗಳು ಸಿಕ್ಕಿವೆ.
ಪ್ರಶ್ನೆ 6: 20 ವರ್ಷದಲ್ಲಿ ಅವರನ್ನು ಹುಡುಕಿಕೊಂಡು ಯಾರಾದ್ರೂ ಬಂದಿರೋದನ್ನ ನೋಡಿದ್ದೀರಾ?
ಉತ್ತರ 6: 2014ರ ಬಳಿಕ ಊರು ಬಿಟ್ಟು ಹೋದ್ವಿ. ಆಗ ಪ್ರಚಾರ ಇರಲ್ಲಾ ಅನ್ಸತ್ತೆ. ಯಾರೂ ಹುಡುಕಿಕೊಂಡು ಬಂದದ್ದು ಗೊತ್ತಾಗಿಲ್ಲ. ಈಗ ಎಲ್ಲಾ ಬರುತ್ತಿದ್ದಾರೆ.
ಪ್ರಶ್ನೆ 7: ಎಷ್ಟು ಶವಗಳನ್ನು ನೀವು ಹೂತು ಹಾಕಿದ್ದೀರಾ? ಸ್ಪಾಟ್ ನಂಬರ್ 1ರಿಂದ 13ರವರೆಗೆ. ನಂಬರ್ 1ನಲ್ಲಿ ಎಷ್ಟು ಮಾಡಿದ್ದೀರಾ?. ಯಾವುದು ತುಂಬಾ ಇಂಪಾರ್ಟೆಂಟ್ ಸ್ಪಾಟ್ ನಿಮ್ಮ ಪ್ರಕಾರ?
ಉತ್ತರ 7: ಈಗ ತೆಗೆಯುತ್ತಿರುವ ಸ್ಪಾಟ್ ತುಂಬಾ ಇಂಪಾರ್ಟೆಂಟ್. ಸ್ಪಾಟ್ ನಂಬರ್ 13ರಲ್ಲಿ 70ರಿಂದ 80 ಹೆಣಗಳನ್ನು ಹಾಕಿದ್ದೇವೆ. ಅಲ್ಲೇ ನಾವು ಜಾಸ್ತಿ ಹೆಣ ಹಾಕಿದ್ದು. ಮತ್ತು ಗುಡ್ಡದಲ್ಲೂ ಹಾಕಿದ್ದೇವೆ.
ಪ್ರಶ್ನೆ 8: 6 ಮತ್ತು 11 ಎ. ಇವೆರಡರಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಮಿಕ್ಕ ಜಾಗದಲ್ಲಿ ಸಿಕ್ಕಿಲ್ಲ. ಈಗ ನಿಮ್ಮ ಮೇಲೆ ಬಹಳಷ್ಟು ಜನ ಸಂಶಯ ಪಡುತ್ತಿದ್ದಾರಲ್ಲಾ. ಈಗ ಸಿಕ್ಕಿರುವ 2 ಶವಗಳು ಗಂಡಸರದ್ದು ಅಂತಾ ಹೇಳ್ತಿದ್ದಾರೆ. ಇದರ ಬಗ್ಗೆ ಏನ್ ಹೇಳ್ತೀರಾ?
ಉತ್ತರ 8: ಹೇಳುವವರು ಸಾವಿರ ಹೇಳ್ತಾರೆ. ನಾವು ಹೇಳೋದು ಏನೂ ಇಲ್ಲ. ಆದರೆ ಅವರು ತಿಳಿದುಕೊಂಡು ಹೇಳಬೇಕು. ಮಾತಾಡೋರು ಹೇಗೆ ಬೇಕಾದ್ರೂ ಹೇಳ್ತಾರೆ. ಎಷ್ಟು ಬೇಕಾದ್ರೂ ಹೇಳಬಹುದು. ಕೇಳುವವರು ನಾವು. ಇಷ್ಟು ವರ್ಷ ಕಳೆದ ಬಳಿಕ ತೋರಿಸೋದೆ ದೊಡ್ಡ ವಿಷ್ಯ. ಮಣ್ಣಿನ ಗುಣ ಎಲ್ಲಾ ಚೇಂಜ್ ಆಗಿದೆ. ಗಿಡ ಮರಗಳೆಲ್ಲವೂ ಬೆಳೆದಿದೆ. ಆಗಿರುವಾಗ ನಾನು ಹೇಗೆ ಗುರುತು ಹಿಡಿಯಲು ಸಾಧ್ಯ. ಮಿಷಿನ್‌ನಿಂದಲೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ನಾನು ಮನುಷ್ಯ. ಸಾಧ್ಯವಾದಷ್ಟು ಪ್ರಯತ್ನ ಪಟ್ಟು ನಾನು ತೋರಿಸುತ್ತಿದ್ದೇನೆ. ತೋರಿಸುವಾಗ ಸ್ವಲ್ಪ ಆಚೆ-ಈಚೆ ಆಗಬಹುದು. ಸ್ವಲ್ಪ ತೆಗೆಯುತ್ತಿದ್ದಾರೆ. ಫಾರೆಸ್ಟ್ ಅಂತೆಲ್ಲಾ ಹೇಳ್ತಿದ್ದಾರೆ. ಸಂರಕ್ಷಿತ ಅರಣ್ಯವನ್ನು ಕಡಿಯಬಾರದು ಅಂತಾ ಹೇಳ್ತಾರೆ.
ಪ್ರಶ್ನೆ 9: ಆಗ ಹೇಗಿತ್ತು.? ಈಗ ಹೇಗಿದೆ?
ಉತ್ತರ 9: ಆಗ ಇದ್ದ ಕಾಡಿಗೆ ಈಗಿನ ಕಾಡಿಗೆ ವ್ಯತ್ಯಾಸ ಇದೆ. ಆಗ ಕಾಡೆಲ್ಲಾ ಕಮ್ಮಿ ಇತ್ತು. ಈಗ ಬೆಳೆದುಕೊಂಡಿದೆ. ಅದು ನನಗೆ ನೋಡುವಾಗ ಗುರುತು ಸಿಗುತ್ತಿಲ್ಲ. ಭೂಮಿ ಚೇಂಚ್ ಆದಂತೆ ಕಾಣಿಸುತ್ತಿದೆ. ಬೇರುಗಳು ದೊಡ್ಡದಾಗಿವೆ. ಮಣ್ಣು ಕುಸಿದಿದೆ. ಮಣ್ಣಿನ ಕೆಲಸಗಳು ನಡೆದಿದೆ. 1ರಿಂದ 5ರ ತನಕ ಮಣ್ಣು ಕುಸಿದಿದ್ದು, ತೆಗೆದಿದ್ದಾರೆ ಅನ್ಸತ್ತೆ. ಏನು ಅಂತಾ ಗೊತ್ತಾಗುತ್ತಿಲ್ಲ. ಬಾಡಿ ಇರೋದೆ ಸಂಶಯ. ಆದರೂ ನಾವು ತೋಡಿ ನೋಡಿದ್ದೇವೆ.
ಪ್ರಶ್ನೆ 10: ಅದೆಲ್ಲಾ ನೀವು ಹೆಣ ಹಾಕಿರೋ ಸ್ಪಾಟಾ?
ಉತ್ತರ 10: ಕರೆಕ್ಟಾಗಿಯೇ ತೋರಿಸುತ್ತಿದ್ದೇನೆ. ಆ ನಂಬರ್‌ಗಳಲ್ಲಿ ಹೆಣ ಸಿಕ್ಕಿದೆ. ಅಲ್ಲಿ ಇಲ್ಲ ಅಂತಾ ಹೇಳಿದ್ರೆ ನಾನೇನೂ ಮಾಡೋಕೆ ಆಗಲ್ಲ.
ಪ್ರಶ್ನೆ 11: ನೀವು, ಭಾವ, ರಾಜು ಅವರನ್ನು ಹೊರತುಪಡಿಸಿ, ಅಗೆಯುವಾಗ, ಹೂತು ಹಾಕುವಾಗ ಬೇರೆ ಯಾರಾದ್ರೂ ಇದ್ರಾ? ಯಾರಿದ್ರು?
ಉತ್ತರ 11: ಇರುತ್ತಿದ್ವಿ. ನಾವು ಹೆಣ ಹೂಳುವಾಗ ಭಾವಾ ಮಾರಾ, ರಾಜು, ರಂಗ ಸೇರಿದಂತೆ ಐದಾರು ಜನ ಇರ್ತಿದ್ರು.
ಪ್ರಶ್ನೆ 12: ಗ್ರಾಮ ಪಂಚಾಯಿತಿಯಿಂದ ಯಾರಿದ್ರು.
ಉತ್ತರ 12: ಗ್ರಾಮ ಪಂಚಾಯಿತಿಯಿಂದ ಯಾರೂ ಬರುತ್ತಿರಲಿಲ್ಲ. ದೇವಸ್ಥಾನದ ವತಿಯಿಂದಲೇ ನಾವು ಹೂತು ಹಾಕುತ್ತಿದ್ದೆವು.
ಪ್ರಶ್ನೆ 13: 20 ವರ್ಷ ಕೆಲಸ ಮಾಡಿದ್ದೀರಿ. ಹೆಣ ಹೂಳೋಕೆ ಯಾರು ಸಂದೇಶ ಕೊಡ್ತಿದ್ರು. ಹೆಣ ಹೂಳಲು ಯಾರು ಹೇಳ್ತಿದ್ರು..?
ಉತ್ತರ 13: ಮಾಹಿತಿ ಕಚೇರಿಯವ್ರು ಹೇಳುತ್ತಿದ್ರು.
ಪ್ರಶ್ನೆ 14: ದೇವಸ್ಥಾನದ ಆಡಳಿತ ಕಚೇರಿಯವ್ರು ನಿಮಗೆ ಹೆಣ ಹೂಳಲು ಹೇಳ್ತಿದ್ರಾ?
ಉತ್ತರ 14: ಹೌದು
ಪ್ರಶ್ನೆ 15: ಗ್ರಾಮ ಪಂಚಾಯಿತಿಯವ್ರು ಅಥವಾ ದೇವಸ್ಥಾನದವರು ಲೆಕ್ಕ ಇಟ್ಟಿದ್ದಾರಾ?
ಉತ್ತರ 15: ಶವ ಹೂಳುವ ಬಗ್ಗೆಯೂ ಲೆಕ್ಕ ಇಟ್ಟಿರೋ ಬಗ್ಗೆ ಗೊತ್ತಿಲ್ಲ. ಅವರೋ ಇವರೋ ಗೊತ್ತಿಲ್ಲ. ನನಗೆ ದೇವಸ್ಥಾನದವರು ಬಂದು ಹೇಳ್ತಿದ್ರು. ಮಾಡ್ತಿದ್ವಿ.
ಪ್ರಶ್ನೆ 16: ನೀವು ರಿಪೋರ್ಟ್ ಮಾಡಿದ್ದು ದೇವಸ್ಥಾನಕ್ಕಾ?
ಉತ್ತರ 16: ದೇವಸ್ಥಾನದ ಮಾಹಿತಿ ಕಚೇರಿಗೆ
ಪ್ರಶ್ನೆ 17: ಅರಣ್ಯ ಪ್ರದೇಶ ಬಿಟ್ಟು ಸ್ಮಶಾನ ಏನಾದ್ರೂ ಇದೆಯಾ?
ಉತ್ತರ 17: ನಾವು ಅರಣ್ಯ ಪ್ರದೇಶದಲ್ಲಿ ಮಾತ್ರ ಹೆಣ ಹೂಳುತ್ತಿದ್ದೆವು.
ಪ್ರಶ್ನೆ 18: ಸ್ಮಶಾನ ಜಾಗದಲ್ಲಿ ನೀವು ಮಾಡ್ತಿರಲಿಲ್ವಾ?
ಉತ್ತರ 18: ನೇತ್ರಾವತಿ ಆಚೆ-ಈಚೆ. ಕಾಡಿನ ಸುತ್ತಮುತ್ತ, ಗಿಡಗಳು ಇದ್ರೆ ಅಲ್ಲೇ ಗುಂಡಿ ತೆಗೆದು ಹೂಳುತ್ತಿದ್ದೆವು. ಸ್ಮಶಾನಕ್ಕೆ ನಾವು ಹೋಗುತ್ತಿರಲಿಲ್ಲ.
ಪ್ರಶ್ನೆ 19: ಇಷ್ಟು ವರ್ಷ ಆದ್ಮೇಲೆ ಮತ್ತೆ ಏಕೆ ವಾಪಸ್ ಬಂದಿದ್ದೀರಾ?
ಉತ್ತರ 19: ನಮಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಬುರುಡೆ ಹೊಡೆದ ರೀತಿ ಕನಸು ಬೀಳುತ್ತಿತ್ತು. ಇದನ್ನು ತೋರಿಸಿದ್ರೆ ಪುಣ್ಯ ಸಿಗುತ್ತೆ. ಸತ್ತವರಿಗೆ ಪೂಜೆ-ಪುನಸ್ಕಾರ ಆಗಿಲ್ಲ. ಅದನ್ನು ಮಾಡಿಸೋಣ ಅಂತಾ ಬಂದಿದ್ದೇನೆ.
ಹೀಗಂತ ಅನಾಮಿಕ ವ್ಯಕ್ತಿ ಸ್ಪಷ್ಟನೆ ಕೊಟ್ಟಿದ್ದಾನೆ.