ಗದಗ ಜಿಲ್ಲೆ:
ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರ ಬರುತಿದ್ದಂತೆ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನುಆಪ್ ಪಕ್ಷದ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಅಮ್ ಆದ್ಮಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿದ್ದಾರೆ .
ಗದಗ ಜಿಲ್ಲೆ ರೋಣಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ರೋಣಾ ವಿಧಾನಸಭಾ ಕ್ಷೇತ್ರದ ಮುಂಡರಗಿ ಭಾಗದ ವಿವಿಧ ಹಳ್ಳಿಗಳಿಗೆ ಭೇಟಿ ಕೊಟ್ಟ ಆನೇಕಲ್ ದೊಡ್ಡಯ್ಯ ಪ್ರಚಾರ ನಡೆಸಿದ್ರು. ಆನೇಕಲ್ ದೊಡ್ಡಯ್ಯ ಜೊತೆ ನೂರಾರು ಯುವಕರು, ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡರು ಸೇರಿದಂತೆ ಹಳ್ಳಿಗಳ ಜನ ಪ್ರಚಾರದಲ್ಲಿ ಭಾಗಿಯಾಗಿದ್ರು. ಈ ವೇಳೆ ಮಾತ್ನಾಡಿದ ಆನೇಕಲ್ ದೊಡ್ಡಯ್ಯ, ರೋಣಾದ ಅಭಿವೃದ್ಧಿಗಾಗಿ ಎಎಪಿಗೆ ಮತ ನೀಡುವಂತೆ ಮನವಿ ಮಾಡಿದ್ರು. ಅಲ್ಲದೆ, ರೋಣಾದಲ್ಲಿ ಗೆದ್ದೇ ಗೆಲ್ತೀನಿ ಅನ್ನೋ ವಿಶ್ವಾಸವನ್ನ ಆನೇಕಲ್ ದೊಡ್ಡಯ್ಯ ವ್ಯಕ್ತಪಡಿಸಿದ್ರು..
ಮೇಲಿಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ, ಏ 5 ರಂದು ಚೆಲುವನಾರಾಯಣ ಸ್ವಾಮಿಯ ಉತ್ಸವ
ಆದಿಚುಂಚನಗಿರಿ ಶ್ರೀಗಳ ವಿರುದ್ದ ಅವಹೇಳನಕಾರಿ ಹೇಳಿಕೆ- ಅಡ್ಡಾದಿಡ್ಡಿ ನಾಲಿಗೆ ಹರಿಬಿಟ್ಟ ಅಡ್ಡಂಡ ಕಾರ್ಯಪ್ಪ