ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣ ಸಾಗಿಸುತ್ತಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಮಹಾರಾಷ್ಟ್ರದ SIT ತಂಡ ಬಂಧಿಸಿದ್ದು, ಚೋರ್ಲಾ ಘಾಟ್‌ನಲ್ಲಿ ನಡೆಸಿದ ವಿಚಾರಣೆಯಲ್ಲಿ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಈ ಬಂಧನವು ದರೋಡೆ ಹಿಂದೆ ನಿಂತವರು ಮತ್ತು ಹಣದ ಮೂಲದ ಕುರಿತು ಸೂಕ್ತ ಮಾಹಿತಿ ನೀಡುವ ನಿರೀಕ್ಷೆಯಾಗಿದೆ. ನಾಸಿಕ್ ಪೊಲೀಸರು ಮಾಹಿತಿ ನೀಡಿರುವಂತೆ, ಚಾಲಕರಿಬ್ಬರ ವಿಚಾರಣೆ ಪ್ರಸ್ತುತ SIT ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಇಂದು ಸಂಜೆ ಬಂಧನದ ಅಧಿಕೃತ ಘೋಷಣೆಯನ್ನು ನೀಡುವ ಸಾಧ್ಯತೆಯಿದೆ.
ಆಕ್ಟೋಬರ್ 22ರಂದು, ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂ. ಹಣಭರಿತ 2 ಕಂಟೇನರ್ ಚೋರ್ಲಾ ಘಾಟ್‌ನಲ್ಲಿ ನಾಪತ್ತೆಯಾಗಿತ್ತು. ದರೋಡೆ ಪ್ರಕರಣವು ದೇಶದಾದ್ಯಂತ ಸಂಚಲನ ಮೂಡಿಸಿದೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದಂತೆ, ಹಣವು ಕಿಶೋರ್ ಸೇಠ್ ಅವರ ಸ್ವಾಮ್ಯದಿದ್ದು, ವಿರಾಟ್ ಗಾಂಧಿ ಎಂಬ ವ್ಯಕ್ತಿಯ ಕೈವಾಡವೂ ಇದರಲ್ಲಿ ಜೋಡಣೆಯಾಗಿತ್ತು.
ಈ ಮಧ್ಯೆ ಉದ್ಯಮಿ ಸಂದೀಪ್ ಪಾಟೀಲ್ ವಿರುದ್ಧ ಹಿಂಸಾತ್ಮಕ ಪ್ರಶ್ನೋತ್ತರಗಳು ನಡೆದಿದ್ದವು. ನೀನು ಶಾಮೀಲಾಗಿದ್ದೀಯಾ, ಹಣ ಎಲ್ಲಿದೆ? ಎಂಬ ಪ್ರಶ್ನೆಗಳಿಗೆ ಹೊತ್ತೊಯ್ಯುವವರ ಮೇಲೆ ಚಿತ್ರಹಿಂಸೆ ನಡೆದಿದ್ದುದಾಗಿ ತನಿಖೆಯಲ್ಲಿ ದಾಖಲಾಗಿದೆ.
ಇನ್ನು, ಉದ್ಯಮಿ ಕಿಶೋರ್ ಹಾಗೂ ಅವರ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆ ವೈರಲ್ ಆಗಿದ್ದು, ಅದರ ಪ್ರಕಾರ ಹಣವು ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದ ಎಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ, ಹಣ ಸಾಗಿಸಲು ಬಳಸಿದ್ದ ಕಂಟೇನರ್ ಚಾಲಕರು ಇಂದು ಪೊಲೀಸ್ ಬಲೆಗೆ ಬಿದ್ದಿದ್ದಾರೆ, ಇದು ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.
ವರದಿ : ಲಾವಣ್ಯ ಅನಿಗೋಳ




