ಬೆಂಗಳೂರು: ಶೇ.40ರಷ್ಟು ಗುತ್ತಿಗೆ ಹಣದಲ್ಲಿ ಕಮೀಷನ್ ಆರೋಪ ಮಾಡಿದ್ದಂತ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬಸ್ಥರಿಗೆ ಇದೀಗ ಕರ್ನಾಟಕ ಕಾಂಗ್ರೆಸ್ ನಿಂದ 11 ಲಕ್ಷ ಪರಿಹಾರವನ್ನು ಘೋಷಿಸಿದೆ.
ಇಂದು ಬೆಳಗಾವಿಯ ಮೃತ ಸಂತೋಷ್ ಮನೆಗೆ ಕಾಂಗ್ರೆಸ್ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಭೇಟಿ ಮಾಡಿ, ಸಾಂತ್ವಾನ ಹೇಳಿದರು.
ಈ ಬಳಿಕ ಮಾತನಾಡಿದಂತ ಸಿದ್ಧರಾಮಯ್ಯ ನಾವು ಇಲ್ಲಿಗೆ ರಾಜಕೀಯ ಮಾಡೋದಕ್ಕೆ ಬಂದಿಲ್ಲ. ಅಮಾನವೀಯ ಸಾವಿಗೆ ನ್ಯಾಯಕೇಳಲು ಬಂದಿದ್ದೇವೆ. ಯಾವುದೇ ಸಾವಿಗೆ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ. ನಮ್ಮ ಪಕ್ಷದಿಂದ ಕೈಲಾದಷ್ಟು ಸಹಾಯ ಮಾಡೋ ನಿಟ್ಟಿನಲ್ಲಿ ಪರಿಹಾರವಾಗಿ 11 ಲಕ್ಷ ನೀಡಲಾಗುತ್ತಿದೆ. ಸರ್ಕಾರ 1 ಕೋಟಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಇಂತಹ ಘಟನೆ ನಡೆಯಬಾರದಾಗಿತ್ತು. ಸಂತೋಷ್ ತಾಯಿ, ಪತ್ನಿ ನೋವು ಹೇಳಿಕೊಂಡಿದ್ದಾರೆ. ಸಾವಿಗೆ ಕಾರಣ ಯಾರು ಎಂಬ ಮಾಹಿತಿಯನ್ನು ನೀಡಿದ್ದಾರೆ. ಸಂತೋಷ್ ಮೋದಿ, ಶಾ ಬಳಿ ನ್ಯಾಯ ಕೇಳಿದ್ದಾರೆ. ಆದ್ರೇ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯ ಕೊಡಿಸುತ್ತೇವೆ. ಈಶ್ವರಪ್ಪ ವಿರುದ್ಧ ಕೊಲೆ ಕೇಸ್ ದಾಖಲಾಗಬೇಕು ಎಂದರು.




