Wednesday, October 22, 2025

Latest Posts

ಧರ್ಮದ ಹೆಸರಿನಲ್ಲಿ ವಿವಾದ, ಲಿಂಗಾಯತ ಸಂಘಟನೆಗಳಿಂದ ಪ್ರತಿಭಟನೆ!

- Advertisement -

ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅವ್ಯವಹಾರ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೆ ಸಾರ್ವಜನಿಕರು ಅದೆಷ್ಟೋ ಬಾರಿ ಪಂಚಾಯಿತಿ ಎದುರು ಧರಣಿ ಮಾಡಿದ್ದರು.

ಇಂತಹ ಅದೆಷ್ಟೋ ಅನೇಕ ಅವ್ಯವಹಾರ ದೂರಿನ ಹೆಸರನ್ನು ಹೊತ್ತ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಇನ್ನೇನು ಗ್ರಾಮ ಪಂಚಾಯಿತಿ ಚುನಾವಣೆಗಳು ಹತ್ತಿರ ಬರುವ ಸಮಯದಲ್ಲೇ ಮತ್ತೊಂದು ಅವ್ಯವಹಾರದ ದೂರಿನ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಒಬ್ಬರನ್ನು ಅಮಾನತ್ತುಗೊಳಿಸಿ ಆದೇಶ ಮಾಡಲಾಗಿದೆ.

ತಕ್ಷಣದಿಂದಲೇ ಗ್ರಾಮ ಪಂಚಾಯಿತಿ ಕಚೇರಿಯ ಯಾವುದೇ ಕಾರ್ಯಗಳಲ್ಲಿ ಭಾಗವಹಿಸಲು ಅಥವಾ ಕಚೇರಿಯ ದಾಖಲೆಗಳು ಮತ್ತು ದಾಖಲೆ ಪುಸ್ತಕಗಳು ಅಥವಾ ಕಂಪ್ಯೂಟರ್ ಡೇಟಾವನ್ನು ಬಳಸುವ ಅಧಿಕಾರ ಹೊಂದಿರುವುದಿಲ್ಲ ಎಂದು ಆದೇಶಿಸಿ ಅಮಾನತುಗೊಳಿಸಲಾಗಿದೆ.

ಒಟ್ಟಾರೆ ಸೊರವನಹಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಅನೇಕ ದೂರುಗಳ ಬಂದ ಹಿನ್ನೆಲೆ ಈಗ ಕಂಪ್ಯೂಟರ್ ಆಪರೇಟರ್ ಅಮಾನತ್ತಾಗಿದ್ದು, ಇನ್ನೂ ಅಧಿಕಾರಿಗಳು ತನಿಖೆ ಮುಂದುವರೆಸಿದರೆ ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅದೆಷ್ಟು ಅವ್ಯವಹಾರಗಳು ಬೆಳಕಿಗೆ ಬರಲಿದೆ ಕಾದು ನೋಡಬೇಕಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss