Friday, August 29, 2025

Latest Posts

ಮತಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬರಲು ಸಿಎಂ ಜೊತೆ ಚರ್ಚೆ ಮಾಡುತ್ತೇನೆ : ಸಚಿವ ಆರ್.ಅಶೋಕ್

- Advertisement -

ಕೋಲಾರ: ಲವ್ ಜಿಹಾದ್ ಹಾಗು ಪಿಎಫ್ಐ ಸಂಘಟನೆ ಕುರಿತು ಕೋಲಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದರೂ ಕಾಂಗ್ರೆಸ್ ನವರು ತಲೆಕೆಡಿಸಿಕೊಂಡಿಲ್ಲ. ದಿನ ನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿ ಆಗುತ್ತಿದ್ದಾರೆ. ನಾನು ಗೃಹ ಸಚಿವ ಇದ್ದಾಗ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮೊದಲು ಇದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತೆ. ಒಬ್ಬ ಹಿಂದೂ ಯುವತಿಯನ್ನು ಮತಾಂತರ ಮಾಡಿದರೆ ನಾಲ್ಕೈದು ಲಕ್ಷ ನೀಡಲಾಗುತ್ತಿದೆ. ಮುಸ್ಲಿಂ ಯುವಕರಿಗೆ ಬಾಡಿ ಬಿಲ್ಡಿಂಡ್, ಜಿಮ್, ಸಿನಿಮಾ ಗೆ ಕರೆದುಕೊಂಡು ಹೋಗೋದಕ್ಕೆ ಹಣ ಖರ್ಚು ಮಾಡುತ್ತಿದ್ದಾರೆ.

ಕೊಪ್ಪಳದಲ್ಲಿ ಬಿಎಸ್ ಯಡಿಯೂರಪ್ಪ ತಿರುಗೇಟು

ಇನ್ನು ಮತಾಂತರ ಆದ ಬಳಿಕ ಕೆಲವೇ ತಿಂಗಳಲ್ಲಿ ಇನ್ನೆರೆಡು ಮದುವೆ ಆಗುತ್ತಿದ್ದಾರೆ.ಮತಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂದು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ದೇಶದ್ರೋಹಿ ಸಂಘಟನೆಗಳನ್ನ ಮಟ್ಟ ಹಾಕಿ ಬಗ್ಗು ಬಡಿಯುತ್ತೇವೆ. ಇವರ ಒಂದು ಸಂಘಟನೆ ಬ್ಯಾನ್ ಮಾಡಿದರೆ ಇನ್ನೊಂದು ಹೊಸ ಸಂಘಟನೆ ಮಾಡುವ ಗೋಮುಖ ವ್ಯಾಘ್ರಗಳು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದ ಅವ್ಯವಸ್ಥೆ: ಇಂದು ಕೇಂದ್ರ ಗೃಹ ಕಾರ್ಯದರ್ಶಿಗಳ ಬಿಗ್ ಮೀಟಿಂಗ್

ಒಂದೇ ವೇದಿಕೆಯಲ್ಲಿ ಪ್ರಿನ್ಸ್ ಮಹೇಶ್ ಹಾಗೂ ಬನ್ನಿ ಅಲ್ಲು ಏನಿದು ವಿಶೇಷ..?

- Advertisement -

Latest Posts

Don't Miss