ಸತತ ಮೂರು ವರ್ಷದಿಂದ ಕಾಡುತ್ತಿರುವ ಮಹಾಮಾರಿ ಕೊರೋನಾ ಮತ್ತೆ ಚೀನಾಕ್ಕೆ ಕಾಲಿರಿಸಿದ್ದು, ಶಾಂಘೈ ನಗರದಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಜನರಷ್ಟೇ ಅಲ್ಲದೇ, ಸಾಕು ಪ್ರಾಣಿಗಳನ್ನ ಕೂಡ ಮಮನೆಯಿಂದ ಹೊರಬಿಡಬಾರದೆಂದು ಆದೇಶ ಹೊರಡಿಸಲಾಗಿದೆ. ಪ್ರಪಂಚದಲ್ಲಿ ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು, ಚೀನಾದಲ್ಲಿ. ಸದ್ಯ ಹಲವು ದೇಶಗಳು ವ್ಯಾಕ್ಸಿನ್ ತೆಗೆದುಕೊಂಡು, ಕೊರೊನಾದಿಂದ ಮುಕ್ತಿ ಪಡೆದಿದೆ. ಆದ್ರೂ ಕೂಡ ಕೊರೋನಾ ಆತಂಕ ಇನ್ನೂ ಕಡಿಮೆಯಾಗಿಲ್ಲ.
ಕೊರೊನಾ, ಡೆಲ್ಟಾ ನಂತರ ಓಮಿಕ್ರಾನ್ ಬಂದಿತ್ತು. ಇದೀಗ ಇನ್ನೊಂದು ಹೊಸಾ ಕೊರೊನಾ ವೈರಸ್ ಅಟ್ಯಾಕ್ ಮಾಡಿದೆ ಎನ್ನಲಾಗಿದೆ. ಹಾಗಾಗಿ ಶಾಂಘೈನಲ್ಲಿ ಜನರಷ್ಟೇ ಅಲ್ಲದೇ, ಸಾಕು ಪ್ರಾಣಿಗಳನ್ನ ಕೂಡ ಮನೆಯಿಂದ ಹೊರಬಿಡದಂತೆ ಆದೇಶಿಸಲಾಗಿದೆ. ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಹೊರಬಿದ್ದಿರುವ ಕಾರಣ, ಈ ನಿಯಮ ಜಾರಿ ಮಾಡಲಾಗಿದೆ. ನಗರದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ.
ಇನ್ನು ಚೀನಾ ಸರ್ಕಾರ 20ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನ ಆಮದು ಮಾಡಿಕೊಂಡಿದೆ. ಚೀನಾದಲ್ಲಿ ವ್ಯಾಪಾರಗಳು ನಷ್ಟ ಕಾಣುತಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳ ನೆರವಿಗೆ ಚೀನಾ ಸಹಾಯ ಮಾಡುತ್ತಿದೆ. ಸದ್ಯ ಚೀನಾ ಈ ಹಿಂದೆ ಇದ್ದಂತೆ ಲಾಕ್ಡೌನ್ನಲ್ಲಿ ದಿನ ದೂಡುತ್ತಿದೆ.




