- Advertisement -
www.karnatakatv.net : ಬೆಂಗಳೂರು : ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದ್ದು ಅದರ ಬೆನ್ನಲೇ ಕರ್ನಾಟಕದಲ್ಲೂ ಕೂಡಾ ಪ್ರಕರಣಗಳ ಸಂಖ್ಯೆ ಏರತೊಡಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 1890 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು 9 ಜನರನ್ನು ಬಲಿ ಪಡೆದು ಕೊಂಡಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಪ್ರಕರಣ ಹೇಚ್ಚಿದ್ದು ಬೆಂಗಳೂರಿನ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಮಾಹಿತಿ ಬಂದಿದ್ದು ಜಿಲ್ಲೆಯ ಜನರು ಸಾಮಾಜಿಕ ಅಂತರವನ್ನು ಕಾಪಾಡಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ. ಸಿಎಂ ದೆಹಲಿ ಪ್ರವಾಸದ ಬಳಿಕ ರಾಜ್ಯದಲ್ಲಿ ಕೊರೊನಾ ಪ್ರಕರಣದ ಬಗ್ಗೆ ಚರ್ಚೆಮಾಡುವುದಾಗಿ ತಿಳಿಸಿದ್ದಾರೆ.
- Advertisement -