Sunday, September 8, 2024

Latest Posts

ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಗೆ ಕೊರೊನಾ ಸೋಂಕು..!

- Advertisement -

www.karnatakatv.net:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಗೆ ಕೊರೊನಾ ಸೋಂಕು ತಗುಲಿದೆ ಎಂದು ಮಾಹಿತಿ ದೊರೆತಿದೆ.

ಇತ್ತೀಚೆಗಷ್ಟೇ ನಡೆದ ಸಾಮಾನ್ಯ ಸಭೆಯಲ್ಲಿ ಭಯೋತ್ಪಾದನೆ, ಹವಾಮಾನ ವೈಪರಿತ್ಯ ಇನ್ನು ಅನೇಕ ವಿಚಾರಗಳನ್ನು ಚರ್ಚಿಸಲಾಗಿತ್ತು. ಹಾಗೇ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ನ್ಯೂಯಾರ್ಕ್ ನಿಂದ ವಾಪಾಸಾದ ಬಳಿಕ ಕೊರೊನಾ ಲಕ್ಷಣಗಳು ಗೋಚರಿಸಿದ್ದವು ಎಂದು ತಿಳಿದುಬಂದಿದೆ. ಇವರು ಕೊರೊನಾ ವಿರುದ್ಧ ಸಂಪೂರ್ಣ ಲಸಿಕೆಯನ್ನು ಪಡೆದಿದ್ದರು ಕೂಡಾ ಸೋಂಕು ತಗುಲಿದ್ದು, 10 ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ. 10 ದಿನಗಳ ಕಾಲ ಯಾರ ಸಂಪರ್ಕದಲ್ಲೂ ಬರುವದಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೊರೊನಾ ಲಸಿಕೆ ಪಡೆದಿರುವ ಕಾರಣ ಲಕ್ಷಣಗಳು ತೀವ್ರವಾಗಿಲ್ಲ ಎಂದು ಸಂತೋಷವನ್ನು ವ್ಯಕ್ತಪಸಿದ್ದಾರೆ. ಆಂಟೊನಿ ಬ್ಲಿಂಕೆನ್‌ಗೂ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸುಮಾರು 60 ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಆದರೆ ನೆಡ್ ಅವರನ್ನು ಹೊರತುಪಡಿಸಿ ಇನ್ಯಾರಿಗೂ ಸೋಂಕು ತಗುಲಿರುವ ಕುರಿತು ವರದಿಯಾಗಿಲ್ಲ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಪಾಲ್ಗೊಂಡಿದ್ದರು. ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರಾಗಿದ್ದರು.

- Advertisement -

Latest Posts

Don't Miss