www.karnatakatv.net :ತುಮಕೂರು: ಕೊರೊನಾ ಎರಡನೇ ಅಲೆ ಮುಗಿತು ಅಂದುಕೊಂಡವ್ರಿಗೆ ಮೂರನೇ ಅಲೆಗೆ ರಾಜ್ಯಕ್ಕೆ ಅಪ್ಪಳಿಸಲು ಸಜ್ಜಾದಂತಿದೆ. ಸೋಂಕಿನ ಪ್ರಮಾಣ ಇಳಿಕೆ ಯಿಂದ ಸರ್ಕಾರಿ ಶಾಲಾ- ಕಾಲೇಜು ಆರಂಭಿಸಿದೆ. ಮಕ್ಕಳನ್ನ ಶಾಲೆಗೆ ಕಳುಹಿಸಿರುವ ಪೋಷಕರಲ್ಲಿ ಅತಂಕ ಶುರವಾಗಿದೆ.
ಕೊರೊನಾ ಕಾರಣದಿಂದ ಇಡೀ ಶಿಕ್ಷಣ ವ್ಯವಸ್ಥೆ ದಾರಿ ತಪ್ಪಿದ್ದು, ಬರೋಬ್ಬರಿ ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಾಣದ ಮಕ್ಕಳು ಈಗ ಶಾಲೆಯಡೆಗೆ ಹೆಜ್ಜೆ ಇಡುತ್ತಿದ್ದಾರೆ. ಈ ನಡುವೆ ಪೊಷಕರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದಿದೆ.
ರಾಜ್ಯದಲ್ಲಿ 6 ರಿಂದ 8ನೇ ತರಗತಿಗಳಿಗೆ ಶಾಲೆ ಆರಂಭಿಸಿದ ಕೇವಲ 10 ದಿನಗಳಲ್ಲಿ ಬರೋಬ್ಬರಿ 73 ಮಕ್ಕಳಿಗೆ ಕೊರೊನಾ ವಕ್ಕರಿಸಿದ್ದು ಜಿಲ್ಲಾಡಳಿತಕ್ಕೆ ತಲೆಬಿಸಿ ಶುರುವಾಗಿದೆ. ಇನ್ನು ಶಾಲೆಯ ಒಂದು ಮಗುವಿಗೆ ಕೊರೊನಾ ಪಾಸಿಟಿವ್ ಆದ್ರೆ ಇಡೀ ತರಗತಿಯ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು ಜೊತೆಗೆ ಪಾಸಿಟಿವ್ ಬಂದಿರುವ ಮಕ್ಕಳಿಗೆ ಕ್ವಾರಂಟೀನ್ ಮಾಡಬೇಕು ಮಕ್ಕಳಿಂದ ಪೋಷಕರಿಗೆ ಹರಡಿದ್ಯೋ ಅಥವಾ ಮಕ್ಕಳಿಗೆ ಎಲ್ಲಿಂದ ಕೊರೊನಾ ವಕ್ಕರಿಸುತು ಎಂಬುದನ್ನ ನಿರ್ಧರಿಸಿ ಕ್ರಮ ಕೈಗೊಳ್ಳುವುದೇ ದುಸ್ತರವಾಗಿದ್ದರೆ ಇನ್ನೊಂದಡೆ ಈ ರೀತಿ ಪದೇ ಪದೇ ಟೆಸ್ಟ್ ಮಾಡಿಸೊದ್ರಿಂದ ಕಿರಿಕಿರಿ ಆಗಿ ಮಕ್ಕಳೇ ಶಾಲೆಯಿಂದ ಹೊರ ಉಳಿಯುತ್ತಾರೆ ಎನ್ನುವ ಆತಂಕವೂ ಒಂದಡೆ ಕಾಡ್ತಿದೆ. ಪೋಷಕರಲ್ಲಿಯೂ ಆತಂಕ ಮನೆ ಮಾಡಿದೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು

