www.karnatakatv.net: ಬೆಂಗಳೂರು : ಭೂಮಿ ಮೇಲೆ ಮನುಕುಲವನ್ನ ನಿರ್ಣಾಮ ಮಾಡೋಕೆ ಅಂತಾನೇ ಜನ್ಮ ತಾಳಿರುವಂತಿರೋ ಕೊರೋನಾ ವೈರಸ್ ಸದ್ಯಕ್ಕೆ ತಹಬದಿಗೆ ಬಂದಿದೆ. ಮೊದಲನೇ ಅಲೆ, ಎರಡನೇ ಅಲೆಯಿಂದ ಬಚಾವಾದ ಮಂದಿ ಇದೀಗ 3ನೇ ಅಲೆಯ ಆತಂಕದಲ್ಲಿದ್ದಾರೆ. ಆದ್ರೆ ಇದೀಗ ಲಸಿಕೆ ನೀಡೋದಕ್ಕೆ ತಡವಾದ್ರೆ ಕ್ಷಿಪ್ರಗತಿಯಲ್ಲಿ ಕೊರೋನಾ ಸೋಂಕು ಹರಡುತ್ತೆ ಅಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಅಕ್ಚೋಬರ್ ಮೊದಲ ವಾರದಲ್ಲಿ ಕೋವಿಡ್ 3ನೇ ಅಲೆ ಶುರುವಾಗಲಿದೆ ಅಂತ ಹೇಳಲಾಗ್ತಿದೆ. ಹೀಗಾಗಿ ಪ್ರತಿ ದಿನ ಒಂದು ಕೋಟಿ ಮಂದಿಗೆ ಲಸಿಕೆ ನೀಡಬೇಕು. ಇಲ್ಲವಾದಲ್ಲಿ ನಿತ್ಯ 4 ಲಕ್ಷ ಗಡಿಯಲ್ಲಿರುತ್ತಿದ್ದ ಸೋಂಕಿತರ ಸಂಖ್ಯೆ 6 ಲಕ್ಷ ತಲುಪಲಿದೆ ಅಂತ ತಿಳಿಸಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಸ್ಪಷ್ಟಪಡಿಸಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯ ಸೇರಿದಂತೆ ಮತ್ತಿತರ ಚಿಕಿತ್ಸಾ ವ್ಯವಸ್ಥೆಗೆ ಈಗಲೇ ಕ್ರಮಕೈಗೊಂಡರೆ ಸೂಕ್ತ ಅಂತ ಮಾಹಿತಿ ನೀಡಿದೆ.
ಇನ್ನು ಎರಡನೇ ಅಲೆ ವೇಳೆ ದಿನನಿತ್ಯ ಸೋಂಕಿತರ ಸಂಖ್ಯೆ 4 ಲಕ್ಷ ಗಡಿಯಲ್ಲಿರುತ್ತಿತ್ತು. ಆದ್ರೆ ಈಗ ಮೂರನೇ ಅಲೆಗೆ ಕೇವಲ ಕೆಲವೇ ದಿನಗಳು ಬಾಕಿ ಇದೆ ಅಷ್ಟರಲ್ಲಿ ಬಹುತೇಕ ಎಲ್ಲರಿಗೂ ಕೋವಿಡ್ ಲಸಿಕೆ ನೀಡದೇ ಇದ್ದರೆ ಒಂದು ದಿನಕ್ಕೆ 6 ಲಕ್ಷ ಮಂದಿಗೆ ಸೋಂಕು ತಗುಲೋದು ಪಕ್ಕಾ ಅಂತಲೂ ಎಚ್ಚರಿಕೆ ನೀಡಿದೆ.
ಇನ್ನು ಕರ್ನಾಟಕದಲ್ಲಿ ಈವರೆಗೂ ಒಟ್ಟು 29,41,026 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 28,84,032 ಮಂದಿ ಗುಣಮುಖರಾಗಿ, 19,810 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 37,184 ಮಂದಿ ಈ ವರೆಗೂ ಕೊವಿಡ್ ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗ್ತಿರೋ ರಾಜ್ಯ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಕೇರಳಾ ಎರಡನೇ ಸ್ಥಾನ ಪಡೆದುಕೊಂಡ್ರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಕರ್ನಾಟಕ ಟಿವಿ- ಬೆಂಗಳೂರು